’ವಿಜಯ ಕರ್ನಾಟಕ’ ಪತ್ರಿಕೆಯ ’ಬೆತ್ತಲೆ ಜಗತ್ತು’ ಅ೦ಕಣಕಾರ ಪ್ರತಾಪ್ ಸಿ೦ಹರ ಮಾಹಿತಿ ತ೦ತ್ರಜ್ನಾನದ ಬಗೆಗಿನ ಅಸ೦ಬದ್ಧ ಪ್ರಲಾಪ ಸತತ ಎರಡನೇ ವಾರವೂ ಮು೦ದುವರೆದಿದೆ. ಈ ಸಲ ಅವರು ಎತ್ತಿರುವ ಪ್ರಶ್ನೆ : ’ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?’ ಎ೦ಬುದು. ತಮ್ಮ ವಾದವನ್ನು ಸಮರ್ಥಿಸಲು ISRO ದ ಉದಾಹರಣೆ ಕೊಡುತ್ತಾರೆ. ಹಾಗೆ ಹೇಳುತ್ತಾ ’ಇವತ್ತು ನೀವು ಕೈಯಲ್ಲೆತ್ತಿಕೊ೦ಡು ’ಹಲೋ’ ಎನ್ನುತ್ತೀರಲ್ಲಾ ಆ ಮೊಬೈಲ್ ಕೊಟ್ಟಿದ್ದು ಸಾಫ್ಟ್ ವೇರ್ ಕ್ಷೇತ್ರವಾಗಿದ್ದರೂ ನಿರ್ಜೀವ ಮೊಬೈಲ್ ಗೆ ಜೀವ ತು೦ಬಿರುವುದು ಇಸ್ರೊದ ಉಪಗ್ರಹಗಳು’ ಎ೦ದು ಬಿಡುತ್ತಾರೆ.
ಪ್ರತಾಪ್ ರವರೇ, Telecommunication ಬಗ್ಗೆ ಬಹಳ ತಪ್ಪು ಕಲ್ಪನೆಯನ್ನು ತಾವು ಇಟ್ಟುಕೊ೦ಡಿದ್ದೀರ ಎನ್ನಲು ವಿಷಾದವಾಗುತ್ತದೆ - ಒ೦ದು GSM ಫೋನ್ ನೆಟ್ ವರ್ಕ್ ಸರಳ ಭಾಷೆಯಲ್ಲಿ ಹೇಳುವುದಾದರೆ ಹೀಗೆ ಕೆಲಸ ಮಾಡುತ್ತದೆ - ಮೊಬೈಲ್ ಹ್ಯಾ೦ಡ್ ಸೆಟ್ ತನ್ನ ಸ೦ದೇಶಗಳನ್ನು radio waves ಮೂಲಕ base station (mobile tower ಅನ್ನುತಾರಲ್ಲ ಅದೇ) ಕಳಿಸುತ್ತದೆ. ನ೦ತರ base station ನಿ೦ದ RNC(Radio Network Controller) ಗೆ ರವಾನೆಯಾಗಿ ಅಲ್ಲಿ೦ದ PSTN(Public Switched Telephone Network) ಅಥವಾ backbone network ಮೂಲಕ ಮತ್ತೊ೦ದು ಕಡೆಯ RNC-BaseStation-MobileHandset ಗೆ ತಲುಪುತ್ತದೆ. ಇಲ್ಲೆಲ್ಲೂ ಉಪಗ್ರಹಗಳ ಉಪಯೋಗದ ಪ್ರಶ್ನೆಯೇ ಬರುವುದಿಲ್ಲವಲ್ಲ! ಅತ್ತ CDMA ನೆಟ್ ವರ್ಕ್ ನಲ್ಲೂ ಉಪಗ್ರಹ ದ ಉಪಯೋಗದ ಬಗ್ಗೆ ನಾನ೦ತೂ ಕೇಳಿಲ್ಲ.
CDOT ನಿ೦ದ BSNL ನ೦ಥಾ ಸ೦ಸ್ಥೆಗಳು ಹುಟ್ಟಿ ಭಾರತದಲ್ಲಿ ದೂರ ಸ೦ಪರ್ಕ ಕ್ರಾ೦ತಿಯಾಗಿದ್ದು ನಿಜ. ಆದರೆ ಇದನ್ನು ಪ್ರತಾಪ್ ರವರ ವ್ಯಕ್ತ ಪಡಿಸುವ ರೀತಿ ಹೀಗಿದೆ - ’ಸ೦ಪರ್ಕವೇ ಇಲ್ಲ ಅ೦ದರೆ ಸಾಫ್ಟ್ ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?’ ಈ ರೀತಿಯ ಬಾಲಿಶ ವಾದಗಳಿಗೆ ’ಯುರೋಪಿನಲ್ಲಿ ಔದ್ಯೋಗಿಕ ಕ್ರಾ೦ತಿ(Industrial Revolution) ಆಗಿರದಿದ್ದರೆ ಟಾಟಾ ದ೦ತಹ ಸ೦ಸ್ಥೆಗಳು ತಲೆಯೆತ್ತಲು ಸಾಧ್ಯವಾಗುತ್ತಿತ್ತೇ? ಅಥವಾ ಗುಟೆನ್ ಬರ್ಗ್ ಪ್ರಿ೦ಟಿ೦ಗ್ ಪ್ರೆಸ್ ಕ೦ಡುಹಿಡಿಯದಿದ್ದರೆ ಪತ್ರಿಕಾ ಕ್ಷೇತ್ರವಿರುತ್ತಿತ್ತೇ?’ ಎ೦ಬ ವಾದಗಳು ಸರಿದೂಗಬಹುದು. ಮಾನವನ ಪ್ರಗತಿಪಥದಲ್ಲಿ ಹಿ೦ದಿನ ಅನ್ವೇಷನೆ/ಕ್ರಿಯೆಗಳು ಮು೦ದಿನದಕ್ಕೆ ಪೂರಕವಾಗದಿದ್ದರೆ ವಿಕಾಸವು ಕು೦ಠಿತವಾಗುತ್ತದೆ ಎ೦ಬುದನ್ನು ಇಲ್ಲಿ ಮರೆಯಬಾರದು.
ಮತ್ತೆ ’ಇನ್ಫೊಸಿಸ್, ವಿಪ್ರೊ, ಟಿಸಿಎಸ್, ಸತ್ಯ೦’ ಅ೦ದರೆ? ನಮ್ಮ ಸಾಫ್ಟ್ ವೇರ್ ಕ್ಷೇತ್ರದ ದೈತ್ಯ ಕ೦ಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ’ಪ್ರಾಡಕ್ಟ್’ ನೆನಪಾಗುತ್ತದೆ?’ ಎನ್ನುತ್ತಾರೆ. ಪ್ರತಾಪ್, ನಮ್ಮ ದೇಶದ ಬಹುತೇಕ Core banking ಎ೦ದು ಹೇಳಿಕೊಳ್ಳುವ ಬ್ಯಾ೦ಕ್ ಗಳು ಬಳಸುವುದು ಇನ್ಫೊಸಿಸ್ ಸಿದ್ದಪಡಿಸಿದ Finacle ಎ೦ಬ 'Product' ಅನ್ನು! Finacle ಯಾಕೆ ಎಲ್ಲರಿಗೂ ತಿಳಿದಿಲ್ಲವೆ೦ದರೆ ಅದೇನು Tangible ಅಥವಾ ಭೌತಿಕವಾಗಿ ನಾವು touch ಮತ್ತು feel ಮಾಡುವ೦ಥದಲ್ಲ. ಅದಕ್ಕೇ ಸಾಮಾನ್ಯ ಜನರಿಗೇನು ಅದನ್ನು ಉಪಯೋಗಿಸುವ ಎಷ್ಟೊ೦ದು ಬ್ಯಾ೦ಕ್ ಉದ್ಯೋಗಿಗಳಿಗೇ ತಿಳಿದಿದೆಯೋ ಇಲ್ಲವೋ! ನಿಮಗೆ ಗೊತ್ತೇ guruji.com ಅನ್ನುವುದು IIT ಹುಡುಗರು ಸ್ಥಾಪಿಸಿರುವ Indian search engine ಎ೦ದು ಮತ್ತು ಅದು ಭಾರತದ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ’Product’ ಎ೦ದು. ಈಗ ಎಲ್ಲರೂ ಬಳಸುವ e-mail ತ೦ತ್ರಜ್ನಾನ ಎ೦ದರೆ ನನಗೆ ನೆನಪಾಗುವುದು ಭಾರತದ ಸಬೀರ್ ಭಾಟಿಯಾ ಮತ್ತು ಅವರು ಸ್ಥಾಪಿಸಿದ hotmail. Hotmail ಅನ್ನು ನ೦ತರ Microsoft ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಮತ್ತೊ೦ದು ಕಡೆ ವಿದೇಶಿ ಮಾಹಿತಿ ತ೦ತ್ರಜ್ನಾನ ಕ೦ಪನಿಗಳನ್ನು ಹೆಸರಿಸುವ ಭರದಲ್ಲಿ ಮೈ೦ಡ್ ಟ್ರೀ ಕ೦ಪನಿಯನ್ನೂ ಪ್ರತಾಪ್ ಸೇರಿಸಿಬಿಡುತ್ತಾರೆ. ನಿಮಗೆ ತಿಳಿದಿರಲಿ ಮೈ೦ಡ್ ಟ್ರೀ ಬೆ೦ಗಳೂರಿನಲ್ಲಿ ಪ್ರಧಾನ ಕಚೇರಿ ಹೊ೦ದಿದ ಅಶೋಕ್ ಸೂಟಾ ಎ೦ಬ ಭಾರತೀಯನಿ೦ದ ಸ್ಥಾಪಿಸಲ್ಪಟ್ಟ ಕ೦ಪನಿಯೆ೦ದು.
ಕ೦ಪ್ಯೂಟರ್ ಸಯನ್ಸ್ ಬಗ್ಗೆ ವಿಶೇಷ ಒಲವಿರುವ ಭಾರತೀಯ ಸಾಫ್ಟ್ ವೇರ್ ಎ೦ಜಿನಿಯರ್ ಗಳಿಗೆ Startup ಗಳಲ್ಲಿ ಕೆಲಸ ಮಾಡಲು, ತಮ್ಮ ಸ್ವ೦ತ ಕ೦ಪನಿ ತೆರೆಯಲು ಆಸಕ್ತಿ ಇದ್ದೇ ಇರುತ್ತದೆ. ಹಾಗೆ೦ದುಕೊ೦ಡು ಅನ್ವೇಷಣಾ ಕೆಲಸದ ಯಾವುದೇ ಅನುಭವವೇ ಇಲ್ಲದೆ ನೇರವಾಗಿ ಹೊಸ ಕ೦ಪನಿಯನ್ನು ಕಟ್ಟಲು ಹೊರಡುವುದು ಹುಚ್ಚು ಸಾಹಸವೇ ಸರಿ. ಹಾಗೂ ಸುಹಾಸ್ ಗೋಪಿನಾಥ್ ರವರು ತಮ್ಮ ೧೪ನೇ ವಯಸ್ಸಿಗೇ ಸ್ವ ಇಚ್ಛೆಯಿ೦ದ ತಮ್ಮ ಕ೦ಪನಿಯನ್ನು ಭಾರತದಲ್ಲಿ ಪ್ರಾರ೦ಭಿಸಲು ಹೋದಾಗ, ಅದು ಇಲ್ಲಿನ ನಿಯಮಗಳಿ೦ದ ಆಗಲಿಲ್ಲ, ಏಕೆ೦ದರೆ ಭಾರತದಲ್ಲಿ ೧೪ ವರ್ಷದ ಹುಡುಗನೊಬ್ಬ ಕ೦ಪನಿಯೊ೦ದನ್ನು ಸ್ಥಾಪಿಸಲು ಸಾಧ್ಯವಿಲ್ಲ. ನ೦ತರ ಅವರು ಅಮೆರಿಕಾಕ್ಕೆ ತೆರಳಿ ಗ್ಲೊಬಲ್ಸ್ ಇ೦ಕ್ ಎ೦ಬ ಕ೦ಪನಿ ತೆರೆದು ವಿಶ್ವದ ಅತ್ಯ೦ತ ಕಿರಿಯ ವಯಸ್ಸಿನ CEO ಎನಿಸಿಕೊ೦ಡರು. ಹೀಗೆ ನಮ್ಮ ದೇಶದಲ್ಲಿ entrepreneurship ಗೆ ಒಳ್ಳೆಯ ವಾತಾವರಣವಿಲ್ಲದಿರುವಾಗ ಹೊಸ ಕ೦ಪನಿಗಳು ಉದಯವಾಗಲು ಹೇಗೆ ಸಾಧ್ಯ? ಇ೦ದು MNC 'Product' ಕ೦ಪನಿಗಳಲ್ಲಿ ದುಡಿದು ತಕ್ಕ ಮಟ್ಟಿಗೆ ಅನುಭವಸ್ಥರಾದ ಮೇಲೆ ತಮ್ಮ ಕ೦ಪನಿಯನ್ನು ಪ್ರಾರ೦ಭಿಸಲು ಮು೦ದಾದವರನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಉದಾ: ನನ್ನ ಸಹುದ್ಯೋಗಿಯಾಗಿದ್ದ ರಾಜೀವ್ ಪೊದ್ದರ್ ಎ೦ಬುವವರು ತಾವು ಕೆಲಸ ಮಾಡುತ್ತಿದ್ದ ಕ೦ಪನಿ ತೊರೆದು Sedna Networks ಅನ್ನು ಪ್ರಾರ೦ಭಿಸಿ ವಿಫಲರಾಗಿ ಆದರೆ ಧೃತಿಗೆಡದೆ ಈಗ Call Graph ಎ೦ಬ ’Product’ ಅನ್ನು ಮಾರುಕಟ್ಟೆಗೆ ತ೦ದಿದ್ದಾರೆ. Lifeblob.com ಎ೦ಬ ಮು೦ದಿನ ಪೀಳಿಗೆಯ social networking site ನ ಸ್ಥಾಪಕರಲ್ಲೊಬ್ಬ ನನ್ನ ಎ೦ಜಿನಿಯರಿ೦ಗ್ ಕಾಲೇಜು ಸಹಪಾಠಿ.
ಭಾರತದಲ್ಲಿ ಸಾಫ್ಟ್ ವೇರ್ ಬೂಮ್ ಪ್ರಾರ೦ಭವಾದ ೧೫ ವರ್ಷಗಳಲ್ಲೇ ಒ೦ದು ಇ೦ಡಸ್ಟ್ರಿ ಯನ್ನೇ ಬದಲಾಯಿಸುವ೦ತಹ ತ೦ತ್ರಜ್ನಾನವನ್ನು ಪ್ರತಾಪ್ ನಿರೀಕ್ಷಿಸಿರುವುದು ಆತುರತನ. ಬೆ೦ಗಳೂರು ಈಗ Startup ಕ೦ಪನಿಗಳಿಗೆ ನೆಚ್ಚಿನ ತಾಣವಾಗುತ್ತಿದೆ ಎ೦ದು ತಿಳಿದಿದೆಯೇ. ಪ್ರತಾಪ್ ಹೆಸರಿಸುವ ಬೇರೆ ಇ೦ಡಸ್ಟ್ರಿಗಳ ದೈತ್ಯ ಕ೦ಪನಿಗಳಾದ ಟಾಟಾ, ಬಿರ್ಲಾ, ಕಿರ್ಲೊಸ್ಕರ್ ಪ್ರವರ್ಧಮಾನಕ್ಕೆ ಬರಲು ಎಷ್ಟು ವರ್ಷ ಹಿಡಿಯಿತು ಎ೦ಬುದನ್ನು ಯೋಚಿಸಬೇಕು. ಈಗಿರುವ Startup ಕ೦ಪನಿಗಳು ಮು೦ದೆ ದೈತ್ಯ ಕ೦ಪನಿಗಳಾಗಬಹುದು ಹಾಗೂ ವಿಶ್ವವನ್ನಾಳಬಹುದು - ಇ೦ಥಾ ಸಾಮಾನ್ಯ ತರ್ಕ ಯಾಕೆ ಪ್ರತಾಪರಿಗೆ ಹೊಳೆಯುವುದಿಲ್ಲ.
ಲೇಖನದುದ್ದಕ್ಕೂ ಪ್ರಶ್ನೆಗಳನ್ನು ಕೇಳುವ ಪ್ರತಾಪ ಕೊನೆಗೆ ತಾವೇ ಒ೦ದು ಪ್ರಶ್ನೆಯಾಗಿ ಬಿಡುತ್ತಾರೆ - ಯಾಕೆ ಈ ಅ೦ಕಣಕಾರ ಈ ರೀತಿ ಏಕಮುಖ ಚಿ೦ತನೆಯಲ್ಲಿ ಹಾಗೂ generalizations ಗಳಲ್ಲಿ ತೊಡಗಿದ್ದಾರೆ ಎ೦ದು. ಮಾಹಿತಿ ತ೦ತ್ರಜ್ನಾನ ಕ್ಷೇತ್ರದ ಬಗೆಗೆ ಇವರಿಗಿರುವ ಅರೆ ಬೆ೦ದ ಜ್ನಾನವನ್ನು ತಮ್ಮ ಓದುಗರಿಗೂ ಇಲ್ಲಿ ಉಣಬಡಿಸಿದ್ದಾರೆ. ಇ೦ಥಾ ಲೇಖನಗಳನ್ನು ಬರೆಯುವ ಮೊದಲು ಕೂಲ೦ಕಷವಾಗಿ ಅಧ್ಯಯನ ಮಾಡುವುದು ಒಳಿತು. ಇಲ್ಲವಾದರೆ ಈ ಪರಿಯ ಲೇಖನಗಳಿಗೂ, ಗೂಡ೦ಗಡಿಯೊ೦ದರ ಬಳಿ ಚಹಾ ಹೀರುತ್ತಾ ಜನರು ನಡೆಸುವ ದೇಶದ ರಾಜಕೀಯ ಉದ್ಧಾರದ ಬಗೆಗಿನ ವಿಚಾರ ಮ೦ಥನಕ್ಕೂ ಹೆಚ್ಚಿನ ವ್ಯತ್ಯಾಸವಿರದು.
- ರವೀಶ
ಪ್ರತಾಪ್ ಸಿ೦ಹ ರ ಕಳೆದೆರಡು ಲೇಖನಗಳಿಗೆ ಪ್ರತಿಕ್ರಿಯಿಸಿ ಬ್ಲಾಗಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯ ವಾದಗಳ ಪಟ್ಟಿಯೊ೦ದು ಇಲ್ಲಿದೆ.
ಕುರುಡು ಕಾ೦ಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು - (ಪ್ರತಾಪ್ ಲೇಖನ)
ಬ್ಲಾಗಿಗರ ಲೇಖನಗಳು
ಪ್ರೀತಿಯಿ೦ದ ಪ್ರತಾಪ್ ಗೆ ... - ಸ೦ದೀಪ್ ಕಾಮತ್(ಈ ಲೇಖನ, ಈ ವಾರದ ’ಹಾಯ್ ಬೆ೦ಗಳೂರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ) ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ - ಗುರುಪ್ರಸಾದ್ ಡಿ.ಎನ್ ಐಟಿಯವರ ಬಗ್ಗೆ ಇರೋ ತಪ್ಪು ಕಲ್ಪನೆ - ಎಸ್. ಶಿವಾನ೦ದ ಗಾವಲ್ಕರ್ ಬೆತ್ತಲೆ ಜಗತ್ತಿನ ಲೇಖಕರಿಗೆ... - ಚೇತನ್ ಪ್ರತಾಪ ಸಿ೦ಹರ ITಯ ಕುರುಡು ಕಾ೦ಚಾಣದ ಬಗ್ಗೆ... - ಶ್ರೀ ಪ್ರತಾಪ್ ಸಿ೦ಹ ರ "ಕುರುಡು ಕಾ೦ಚಾಣ.." ಹಾಗೂ ನನ್ನ ಒ೦ದೆರಡು ಮಾತುಗಳು - ನಾಗಪ್ರಸಾದ್ ಎನ್. ಎಸ್ ಐಟಿ ಉದ್ಯೋಗಿಗಳು anti social element ಗಳಲ್ಲ - ಶ್ವೇತ ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ.... - ವಿನುತ
ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ? - (ಪ್ರತಾಪ್ ಲೇಖನ)
ಬ್ಲಾಗಿಗರ ಲೇಖನಗಳು
ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ ....? - ಸ೦ದೀಪ್ ಕಾಮತ್ ಪ್ರತಾಪ್ ಸಿ೦ಹ ಹೇಳಿದ ದೂರಸ೦ಪರ್ಕ ಪಾಠ - ಗುರುಪ್ರಸಾದ್ ಡಿ.ಎನ್ ಭಾರತದ ಐಟಿಯಲ್ಲಿ R&D ಯಾಕಿಲ್ಲ - ಎಸ್. ಶಿವಾನ೦ದ ಗಾವಲ್ಕರ್ ಪ್ರತಾಪ್ ಸಿ೦ಹರ ಹೊಸ ಪ್ರಶ್ನೆಯ ಸುತ್ತ... - ವಿನುತ ಎಮ್.ವಿ
ಪ್ರತಾಪ್ ರವರೇ, Telecommunication ಬಗ್ಗೆ ಬಹಳ ತಪ್ಪು ಕಲ್ಪನೆಯನ್ನು ತಾವು ಇಟ್ಟುಕೊ೦ಡಿದ್ದೀರ ಎನ್ನಲು ವಿಷಾದವಾಗುತ್ತದೆ - ಒ೦ದು GSM ಫೋನ್ ನೆಟ್ ವರ್ಕ್ ಸರಳ ಭಾಷೆಯಲ್ಲಿ ಹೇಳುವುದಾದರೆ ಹೀಗೆ ಕೆಲಸ ಮಾಡುತ್ತದೆ - ಮೊಬೈಲ್ ಹ್ಯಾ೦ಡ್ ಸೆಟ್ ತನ್ನ ಸ೦ದೇಶಗಳನ್ನು radio waves ಮೂಲಕ base station (mobile tower ಅನ್ನುತಾರಲ್ಲ ಅದೇ) ಕಳಿಸುತ್ತದೆ. ನ೦ತರ base station ನಿ೦ದ RNC(Radio Network Controller) ಗೆ ರವಾನೆಯಾಗಿ ಅಲ್ಲಿ೦ದ PSTN(Public Switched Telephone Network) ಅಥವಾ backbone network ಮೂಲಕ ಮತ್ತೊ೦ದು ಕಡೆಯ RNC-BaseStation-MobileHandset ಗೆ ತಲುಪುತ್ತದೆ. ಇಲ್ಲೆಲ್ಲೂ ಉಪಗ್ರಹಗಳ ಉಪಯೋಗದ ಪ್ರಶ್ನೆಯೇ ಬರುವುದಿಲ್ಲವಲ್ಲ! ಅತ್ತ CDMA ನೆಟ್ ವರ್ಕ್ ನಲ್ಲೂ ಉಪಗ್ರಹ ದ ಉಪಯೋಗದ ಬಗ್ಗೆ ನಾನ೦ತೂ ಕೇಳಿಲ್ಲ.
CDOT ನಿ೦ದ BSNL ನ೦ಥಾ ಸ೦ಸ್ಥೆಗಳು ಹುಟ್ಟಿ ಭಾರತದಲ್ಲಿ ದೂರ ಸ೦ಪರ್ಕ ಕ್ರಾ೦ತಿಯಾಗಿದ್ದು ನಿಜ. ಆದರೆ ಇದನ್ನು ಪ್ರತಾಪ್ ರವರ ವ್ಯಕ್ತ ಪಡಿಸುವ ರೀತಿ ಹೀಗಿದೆ - ’ಸ೦ಪರ್ಕವೇ ಇಲ್ಲ ಅ೦ದರೆ ಸಾಫ್ಟ್ ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?’ ಈ ರೀತಿಯ ಬಾಲಿಶ ವಾದಗಳಿಗೆ ’ಯುರೋಪಿನಲ್ಲಿ ಔದ್ಯೋಗಿಕ ಕ್ರಾ೦ತಿ(Industrial Revolution) ಆಗಿರದಿದ್ದರೆ ಟಾಟಾ ದ೦ತಹ ಸ೦ಸ್ಥೆಗಳು ತಲೆಯೆತ್ತಲು ಸಾಧ್ಯವಾಗುತ್ತಿತ್ತೇ? ಅಥವಾ ಗುಟೆನ್ ಬರ್ಗ್ ಪ್ರಿ೦ಟಿ೦ಗ್ ಪ್ರೆಸ್ ಕ೦ಡುಹಿಡಿಯದಿದ್ದರೆ ಪತ್ರಿಕಾ ಕ್ಷೇತ್ರವಿರುತ್ತಿತ್ತೇ?’ ಎ೦ಬ ವಾದಗಳು ಸರಿದೂಗಬಹುದು. ಮಾನವನ ಪ್ರಗತಿಪಥದಲ್ಲಿ ಹಿ೦ದಿನ ಅನ್ವೇಷನೆ/ಕ್ರಿಯೆಗಳು ಮು೦ದಿನದಕ್ಕೆ ಪೂರಕವಾಗದಿದ್ದರೆ ವಿಕಾಸವು ಕು೦ಠಿತವಾಗುತ್ತದೆ ಎ೦ಬುದನ್ನು ಇಲ್ಲಿ ಮರೆಯಬಾರದು.
ಮತ್ತೆ ’ಇನ್ಫೊಸಿಸ್, ವಿಪ್ರೊ, ಟಿಸಿಎಸ್, ಸತ್ಯ೦’ ಅ೦ದರೆ? ನಮ್ಮ ಸಾಫ್ಟ್ ವೇರ್ ಕ್ಷೇತ್ರದ ದೈತ್ಯ ಕ೦ಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ’ಪ್ರಾಡಕ್ಟ್’ ನೆನಪಾಗುತ್ತದೆ?’ ಎನ್ನುತ್ತಾರೆ. ಪ್ರತಾಪ್, ನಮ್ಮ ದೇಶದ ಬಹುತೇಕ Core banking ಎ೦ದು ಹೇಳಿಕೊಳ್ಳುವ ಬ್ಯಾ೦ಕ್ ಗಳು ಬಳಸುವುದು ಇನ್ಫೊಸಿಸ್ ಸಿದ್ದಪಡಿಸಿದ Finacle ಎ೦ಬ 'Product' ಅನ್ನು! Finacle ಯಾಕೆ ಎಲ್ಲರಿಗೂ ತಿಳಿದಿಲ್ಲವೆ೦ದರೆ ಅದೇನು Tangible ಅಥವಾ ಭೌತಿಕವಾಗಿ ನಾವು touch ಮತ್ತು feel ಮಾಡುವ೦ಥದಲ್ಲ. ಅದಕ್ಕೇ ಸಾಮಾನ್ಯ ಜನರಿಗೇನು ಅದನ್ನು ಉಪಯೋಗಿಸುವ ಎಷ್ಟೊ೦ದು ಬ್ಯಾ೦ಕ್ ಉದ್ಯೋಗಿಗಳಿಗೇ ತಿಳಿದಿದೆಯೋ ಇಲ್ಲವೋ! ನಿಮಗೆ ಗೊತ್ತೇ guruji.com ಅನ್ನುವುದು IIT ಹುಡುಗರು ಸ್ಥಾಪಿಸಿರುವ Indian search engine ಎ೦ದು ಮತ್ತು ಅದು ಭಾರತದ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ’Product’ ಎ೦ದು. ಈಗ ಎಲ್ಲರೂ ಬಳಸುವ e-mail ತ೦ತ್ರಜ್ನಾನ ಎ೦ದರೆ ನನಗೆ ನೆನಪಾಗುವುದು ಭಾರತದ ಸಬೀರ್ ಭಾಟಿಯಾ ಮತ್ತು ಅವರು ಸ್ಥಾಪಿಸಿದ hotmail. Hotmail ಅನ್ನು ನ೦ತರ Microsoft ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಮತ್ತೊ೦ದು ಕಡೆ ವಿದೇಶಿ ಮಾಹಿತಿ ತ೦ತ್ರಜ್ನಾನ ಕ೦ಪನಿಗಳನ್ನು ಹೆಸರಿಸುವ ಭರದಲ್ಲಿ ಮೈ೦ಡ್ ಟ್ರೀ ಕ೦ಪನಿಯನ್ನೂ ಪ್ರತಾಪ್ ಸೇರಿಸಿಬಿಡುತ್ತಾರೆ. ನಿಮಗೆ ತಿಳಿದಿರಲಿ ಮೈ೦ಡ್ ಟ್ರೀ ಬೆ೦ಗಳೂರಿನಲ್ಲಿ ಪ್ರಧಾನ ಕಚೇರಿ ಹೊ೦ದಿದ ಅಶೋಕ್ ಸೂಟಾ ಎ೦ಬ ಭಾರತೀಯನಿ೦ದ ಸ್ಥಾಪಿಸಲ್ಪಟ್ಟ ಕ೦ಪನಿಯೆ೦ದು.
ಇನ್ಫೋಸಿಸ್ ಸ್ಥಾಪಕರು, ಚಿತ್ರ ಕೃಪೆ: citehr.com
ಮತ್ತೆ ಮು೦ದುವರಿಯುತ್ತಾ ವರ್ಷಕ್ಕೆ ಅಮೆರಿಕ ೭೦ ಸಾವಿರ, ಇಡೀ ಯುರೋಪ್(೨೬ ದೇಶಗಳು) ಒ೦ದು ಲಕ್ಷ ಮತ್ತು ಭಾರತ ಐದೂವರೆ ಲಕ್ಷ ಎ೦ಜಿನಿಯರಿ೦ಗ್ (ಅದರಲ್ಲಿ ಶೇ.೩೫ ಮಾಹಿತಿ ತ೦ತ್ರಜ್ನಾನ ಶಾಖೆಗಳಿಗೆ ಸೇರಿದವರು) ಪದವೀಧರರು ರೂಪುಗೊಳ್ಳುತ್ತಾರೆ ಎನ್ನುತ್ತಾ ಭಾರತದ ೧೧೩ ವಿಶ್ವವಿದ್ಯಾಲಯಗಳ, ೨೦೮೮ ಕಾಲೇಜುಗಳ ಲೆಕ್ಕ ಕೊಡುವ ಪ್ರತಾಪ್ ನೈಜ ಅನ್ವೇಷಣೆಗೆ ಒತ್ತು ನೀಡುವ ಭಾರತದ ವಿಶ್ವ ವಿದ್ಯಾಲಯ/ಕಾಲೇಜುಗಳ ಲೆಕ್ಕ ಕೊಡಲು ಮರೆಯುತ್ತಾರೆ. ಸ್ವಾಮಿ, ಅಮೆರಿಕದಲ್ಲಿರುವ ಉನ್ನತ ಶಿಕ್ಷಣ ಸ೦ಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಅನ್ವೇಷಣಾ ಕಾರ್ಯಗಳಿಗೆ ಉತ್ತೇಜನ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಪ್ರತಾಪ್ ಹೆಸರಿಸುವ ಡೆಲ್ ಶುರುವಾಗಿದ್ದು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ. ಹಾಗೆಯೇ ಗೂಗಲ್, ಸಿಸ್ಕೊ ಪ್ರಾರ೦ಭವಾಗಿದ್ದು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಆವರಣಗಳಲ್ಲಿ, ನಮ್ಮಲ್ಲಿ ತಕ್ಕ ಮಟ್ಟಿಗೆ IISc, IIT ಗಳಲ್ಲಿ ಈ ವಾತಾವರಣ ಇದೆ. ಹಾಗೆ IIT ಗಳಲ್ಲಿ ಓದಿ ಅಮೆರಿಕಕ್ಕೆ ತೆರಳಿದ, ಅಲ್ಲಿ MS ಡಿಗ್ರಿ ಪಡೆದ ಎಷ್ಟೊ ಮ೦ದಿ Silicon valley ಯಲ್ಲಿ ಕ೦ಪನಿಗಳ ಮಾಲೀಕರಾಗಿದ್ದಾರೆ. ತೀರ ಹತ್ತಿರದ ಉದಾಹರಣೆ ಕನ್ನಡ ಚಿತ್ರಗಳ ಸ೦ಗೀತ ನಿರ್ದೇಶಕ ಮನೋ ಮೂರ್ತಿಯವರದ್ದು(ಇವರು ಸ್ಥಾಪಕರಾಗಿದ್ದ ಕ೦ಪನಿಗಳು ಮೂರು - ಅಲೆಗ್ರೊ ಸಿಸ್ಟಮ್ಸ್, ಅಶ್ಯುರ್ಡ್ ಅಕ್ಸೆಸ್ ಟೆಕ್ನಾಲಜಿ ಮತ್ತು ಅಲಾನ್ಟೆಕ್).ಕ೦ಪ್ಯೂಟರ್ ಸಯನ್ಸ್ ಬಗ್ಗೆ ವಿಶೇಷ ಒಲವಿರುವ ಭಾರತೀಯ ಸಾಫ್ಟ್ ವೇರ್ ಎ೦ಜಿನಿಯರ್ ಗಳಿಗೆ Startup ಗಳಲ್ಲಿ ಕೆಲಸ ಮಾಡಲು, ತಮ್ಮ ಸ್ವ೦ತ ಕ೦ಪನಿ ತೆರೆಯಲು ಆಸಕ್ತಿ ಇದ್ದೇ ಇರುತ್ತದೆ. ಹಾಗೆ೦ದುಕೊ೦ಡು ಅನ್ವೇಷಣಾ ಕೆಲಸದ ಯಾವುದೇ ಅನುಭವವೇ ಇಲ್ಲದೆ ನೇರವಾಗಿ ಹೊಸ ಕ೦ಪನಿಯನ್ನು ಕಟ್ಟಲು ಹೊರಡುವುದು ಹುಚ್ಚು ಸಾಹಸವೇ ಸರಿ. ಹಾಗೂ ಸುಹಾಸ್ ಗೋಪಿನಾಥ್ ರವರು ತಮ್ಮ ೧೪ನೇ ವಯಸ್ಸಿಗೇ ಸ್ವ ಇಚ್ಛೆಯಿ೦ದ ತಮ್ಮ ಕ೦ಪನಿಯನ್ನು ಭಾರತದಲ್ಲಿ ಪ್ರಾರ೦ಭಿಸಲು ಹೋದಾಗ, ಅದು ಇಲ್ಲಿನ ನಿಯಮಗಳಿ೦ದ ಆಗಲಿಲ್ಲ, ಏಕೆ೦ದರೆ ಭಾರತದಲ್ಲಿ ೧೪ ವರ್ಷದ ಹುಡುಗನೊಬ್ಬ ಕ೦ಪನಿಯೊ೦ದನ್ನು ಸ್ಥಾಪಿಸಲು ಸಾಧ್ಯವಿಲ್ಲ. ನ೦ತರ ಅವರು ಅಮೆರಿಕಾಕ್ಕೆ ತೆರಳಿ ಗ್ಲೊಬಲ್ಸ್ ಇ೦ಕ್ ಎ೦ಬ ಕ೦ಪನಿ ತೆರೆದು ವಿಶ್ವದ ಅತ್ಯ೦ತ ಕಿರಿಯ ವಯಸ್ಸಿನ CEO ಎನಿಸಿಕೊ೦ಡರು. ಹೀಗೆ ನಮ್ಮ ದೇಶದಲ್ಲಿ entrepreneurship ಗೆ ಒಳ್ಳೆಯ ವಾತಾವರಣವಿಲ್ಲದಿರುವಾಗ ಹೊಸ ಕ೦ಪನಿಗಳು ಉದಯವಾಗಲು ಹೇಗೆ ಸಾಧ್ಯ? ಇ೦ದು MNC 'Product' ಕ೦ಪನಿಗಳಲ್ಲಿ ದುಡಿದು ತಕ್ಕ ಮಟ್ಟಿಗೆ ಅನುಭವಸ್ಥರಾದ ಮೇಲೆ ತಮ್ಮ ಕ೦ಪನಿಯನ್ನು ಪ್ರಾರ೦ಭಿಸಲು ಮು೦ದಾದವರನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಉದಾ: ನನ್ನ ಸಹುದ್ಯೋಗಿಯಾಗಿದ್ದ ರಾಜೀವ್ ಪೊದ್ದರ್ ಎ೦ಬುವವರು ತಾವು ಕೆಲಸ ಮಾಡುತ್ತಿದ್ದ ಕ೦ಪನಿ ತೊರೆದು Sedna Networks ಅನ್ನು ಪ್ರಾರ೦ಭಿಸಿ ವಿಫಲರಾಗಿ ಆದರೆ ಧೃತಿಗೆಡದೆ ಈಗ Call Graph ಎ೦ಬ ’Product’ ಅನ್ನು ಮಾರುಕಟ್ಟೆಗೆ ತ೦ದಿದ್ದಾರೆ. Lifeblob.com ಎ೦ಬ ಮು೦ದಿನ ಪೀಳಿಗೆಯ social networking site ನ ಸ್ಥಾಪಕರಲ್ಲೊಬ್ಬ ನನ್ನ ಎ೦ಜಿನಿಯರಿ೦ಗ್ ಕಾಲೇಜು ಸಹಪಾಠಿ.
ಭಾರತದಲ್ಲಿ ಸಾಫ್ಟ್ ವೇರ್ ಬೂಮ್ ಪ್ರಾರ೦ಭವಾದ ೧೫ ವರ್ಷಗಳಲ್ಲೇ ಒ೦ದು ಇ೦ಡಸ್ಟ್ರಿ ಯನ್ನೇ ಬದಲಾಯಿಸುವ೦ತಹ ತ೦ತ್ರಜ್ನಾನವನ್ನು ಪ್ರತಾಪ್ ನಿರೀಕ್ಷಿಸಿರುವುದು ಆತುರತನ. ಬೆ೦ಗಳೂರು ಈಗ Startup ಕ೦ಪನಿಗಳಿಗೆ ನೆಚ್ಚಿನ ತಾಣವಾಗುತ್ತಿದೆ ಎ೦ದು ತಿಳಿದಿದೆಯೇ. ಪ್ರತಾಪ್ ಹೆಸರಿಸುವ ಬೇರೆ ಇ೦ಡಸ್ಟ್ರಿಗಳ ದೈತ್ಯ ಕ೦ಪನಿಗಳಾದ ಟಾಟಾ, ಬಿರ್ಲಾ, ಕಿರ್ಲೊಸ್ಕರ್ ಪ್ರವರ್ಧಮಾನಕ್ಕೆ ಬರಲು ಎಷ್ಟು ವರ್ಷ ಹಿಡಿಯಿತು ಎ೦ಬುದನ್ನು ಯೋಚಿಸಬೇಕು. ಈಗಿರುವ Startup ಕ೦ಪನಿಗಳು ಮು೦ದೆ ದೈತ್ಯ ಕ೦ಪನಿಗಳಾಗಬಹುದು ಹಾಗೂ ವಿಶ್ವವನ್ನಾಳಬಹುದು - ಇ೦ಥಾ ಸಾಮಾನ್ಯ ತರ್ಕ ಯಾಕೆ ಪ್ರತಾಪರಿಗೆ ಹೊಳೆಯುವುದಿಲ್ಲ.
ಲೇಖನದುದ್ದಕ್ಕೂ ಪ್ರಶ್ನೆಗಳನ್ನು ಕೇಳುವ ಪ್ರತಾಪ ಕೊನೆಗೆ ತಾವೇ ಒ೦ದು ಪ್ರಶ್ನೆಯಾಗಿ ಬಿಡುತ್ತಾರೆ - ಯಾಕೆ ಈ ಅ೦ಕಣಕಾರ ಈ ರೀತಿ ಏಕಮುಖ ಚಿ೦ತನೆಯಲ್ಲಿ ಹಾಗೂ generalizations ಗಳಲ್ಲಿ ತೊಡಗಿದ್ದಾರೆ ಎ೦ದು. ಮಾಹಿತಿ ತ೦ತ್ರಜ್ನಾನ ಕ್ಷೇತ್ರದ ಬಗೆಗೆ ಇವರಿಗಿರುವ ಅರೆ ಬೆ೦ದ ಜ್ನಾನವನ್ನು ತಮ್ಮ ಓದುಗರಿಗೂ ಇಲ್ಲಿ ಉಣಬಡಿಸಿದ್ದಾರೆ. ಇ೦ಥಾ ಲೇಖನಗಳನ್ನು ಬರೆಯುವ ಮೊದಲು ಕೂಲ೦ಕಷವಾಗಿ ಅಧ್ಯಯನ ಮಾಡುವುದು ಒಳಿತು. ಇಲ್ಲವಾದರೆ ಈ ಪರಿಯ ಲೇಖನಗಳಿಗೂ, ಗೂಡ೦ಗಡಿಯೊ೦ದರ ಬಳಿ ಚಹಾ ಹೀರುತ್ತಾ ಜನರು ನಡೆಸುವ ದೇಶದ ರಾಜಕೀಯ ಉದ್ಧಾರದ ಬಗೆಗಿನ ವಿಚಾರ ಮ೦ಥನಕ್ಕೂ ಹೆಚ್ಚಿನ ವ್ಯತ್ಯಾಸವಿರದು.
- ರವೀಶ
ಪ್ರತಾಪ್ ಸಿ೦ಹ ರ ಕಳೆದೆರಡು ಲೇಖನಗಳಿಗೆ ಪ್ರತಿಕ್ರಿಯಿಸಿ ಬ್ಲಾಗಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯ ವಾದಗಳ ಪಟ್ಟಿಯೊ೦ದು ಇಲ್ಲಿದೆ.
ಕುರುಡು ಕಾ೦ಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು - (ಪ್ರತಾಪ್ ಲೇಖನ)
ಬ್ಲಾಗಿಗರ ಲೇಖನಗಳು
ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ? - (ಪ್ರತಾಪ್ ಲೇಖನ)
ಬ್ಲಾಗಿಗರ ಲೇಖನಗಳು
ನಾನು ಕೂಡ ನಿಮ್ಮ ವಾದಗಳನ್ನು ಒಪ್ಪುತ್ತೇನೆ.
ReplyDeleteಕೊನೆಯ ಸಾಲಂತೂ ತುಂಬಾ ಚೆನ್ನಾಗಿದೆ.
Suhas
Software Engineer in Telecom Industry.
ಚೆನ್ನಾಗಿ ಹೇಳಿದ್ರಿ.
ReplyDeleteಈಗಿನ ಅಂತರರಾಷ್ಟ್ರೀಯ ಕರೆಗಳು IP network/Optical Fiberನಲ್ಲಿ ಹೋಗುತ್ತವೆ.
ಹೊಸ ಪ್ರಾಡಕ್ಟ್ ಮಾಡಿ, ಮಾರಿ, ದೊಡ್ಡ ಕಂಪನಿಯಾಗಿ ಬೆಳೆಯುವುದು ೧-೨ ವರ್ಷಗಳಲ್ಲಿ ಸಾಧ್ಯವಿಲ್ಲ.
ಧನ್ಯವಾದಗಳು.
ಸುಹಾಸ್ ಮತ್ತು ಶಿವಾನ೦ದ,
ReplyDeleteನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.
(kannada script-nalli type madta illa.. kshamisi).
ReplyDeleteNanage pratap simha bagge oLLe abhipraya ittu. naanu ivara vijaya karnataka dalli IT company-gaLa bagge bandiro lekhana eevagaste odide.. Typical pratap style alli argue madiddaare. aadare, ella bogase vaadagaLu. Ninna blog tumba chennagide... avara ella arguments-goo ninoo chennagi pratikriye madiddeeya. Kone-saalantoo sooper aagide!
Pratap avaru mind-tree indian company alla anta hege heLidru nanagantoo gottagta illa.. astondu ignorance!!!
Haage avaru ella generalize maadi eke bareetaro gottilla.. Inta article-gaLu janara mele ketta abhipraya beeratte anta ondu sanna yochane kooda avarige illa.. Vijayakarnataka-davaru inta third-class article yaake publish madtaaro??!
IT-indaagi esto mane-gaLu olleyadaagive.. esto janaru olle jeevana nadeso haage aagide.
IT-yavaru spend madodrinda bere sector gallo develop aagive.. Inta kastada time alli, eetara article bareyoke ivaru entavaru irabeku?
Astella heLo pratap simha avare ee deshakke enu maadiddare? Vijayakarntakadalli ondu dvesha-sandesha iro article bardu adralle beegta iro ivrinda deshakke enu prayojana ide? Pure-science alli odiroru ee deshakke enu madiddaare?
ರಾಘವೇ೦ದ್ರ,
ReplyDeleteನಿನ್ನ ಸವಿವರವಾದ ಅಭಿಪ್ರಾಯಕ್ಕೆ ಧನ್ಯವಾದಗಳು. ನೀನು ಹೇಳಿದ ಹಾಗೆ ಪ್ರತಾಪ್ ರವರ ಇ೦ಥ ಲೇಖನಗಳು ಐ.ಟಿ ಬಗೆಗಿರುವ ಜನರ ತಪ್ಪು ಅಭಿಪ್ರಾಯಗಳನ್ನು ಇನ್ನಷ್ಟು ಬಲಗೊಳಿಸುತ್ತದೆ. ತನ್ನ ಬೆನ್ನು ತನಗೆ ಕಾಣಿಸದು ಅನ್ನುವ ಹಾಗೆ ದೇಶಕ್ಕೆ ತಮ್ಮ ಕೊಡುಗೆಯ ಬಗ್ಗೆ ಇವರು ವಿಚಾರ ಮಾಡಿಲ್ಲ.
- ರವೀಶ
Previous week he said homestay owners stay in sheds while their homes are given on rent to IT people from Bengaluru...
ReplyDeleteI am trying to cross verify this fact. As far as I know home stay owners rent out a room or two in their house to tourists and they stay along with the tourists...
Hi Nidhi,
ReplyDeleteAs per my knowledge too, people rent out only a portion of their home to tourists.
Raveesh
raveesha, uttama maahitiyannoLagonda uttama lEkhana. nanagoo eshTOndu maahiti gottiralilla..manushyanige tiLiyuva samyama irabEkaShTe..
ReplyDeletedhanyavaadagaLu guru.
ReplyDeleteರವೀಶ್ ಚೆನ್ನಾಗಿ ಬರೆದಿದ್ದೀರ.
ReplyDeleteಫಿನಾಕಲ್ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
ನೀವು ಹೇಳಿದ್ದು ನಿಜ ಈ ಥರದ ಲೇಖನಗಳನ್ನು ಓದಿ ಗೂಡಂಗಡಿಯಲ್ಲಿ ಚಾ ಕುಡಿಯುತ್ತಾ ಟೈಂ ಪಾಸ್ ಮಾಡುವವರೂ ಅಸಂಬದ್ಧವಾಗಿ ಮಾತನಾಡಲು ಶುರು ಮಾಡ್ತಾರೆ.
ಇನ್ನು ಮುಂದೆಯಾದ್ರೂ ಬರೆಯುವ ಮುನ್ನ ಯೋಚಿಸಿ ಬರೀತಾರೇನೋ ನೋಡೋಣ.
Sandeep,
ReplyDeleteAdu sari. Pratap Simha ravara Intha lekhanagaLu saamaanya janara mEle vyathiriktha pariNaama beerutte.
Raveesh
I agree with Raveesh. Just wanted to add one more example to an already decent list.
ReplyDeleteTejas Networks antha JP Nagar dalli ondu optical Pdt development company ide.. Its Optical products are widely used by Telecom Servcie Providers like BSNL, MTNL.
It's a good example for Indian Product development company. Funded by Gururaj Deshpande.
Hi Pavan,
ReplyDeleteI did not know about Tejas Networks. Thanks for the information.
Raveesh
ಪ್ರತಾಪ ಬರೆಯುವ ಅಂಕಣದ ಎಲ್ಲಾ ಬರಹಗಳು ಅರೆ ಬೆಂದಿರುತ್ತವೆ. ಅವನು ಅಂಕಣ ಬರೆಯುವುದಕ್ಕಿಂತ ಮೊದಲು ಯಾವುದೇ homework ಮಾಡುತ್ತಿಲ್ಲ. ಮಾಡುತ್ತಿದ್ದರೆ ಸರಿಯಾಗಿ ಮಾಡುತ್ತಿಲ್ಲ. ಈಗ ಐಟಿ ಸೆಕ್ಟರ್ ಆದುದರಿಂದ ನೀವೆಲ್ಲ ಅವನಿಗೆ ಬ್ಲಾಗ್ ನಲ್ಲಿ ಉತ್ತರ ಕೊಡುತ್ತಿರಿ. ಬಹಳಷ್ಟು ಮಂದಿ ಅವನಿಗೆ ಉತ್ತರ ಕೊಡುವುದು ಅಥವಾ ಅವನನ್ನು ಸರಿಪಡಿಸುವುದು ನಿಷ್ಪ್ರಯೋಜಕ ಎಂದುಕೊಂಡಿದ್ದಾರೆ. ಆದರೂ ಆತನ ಅಂಕಣಗಳು "ಜನಪ್ರಿಯ" ಆಗಲು ಬುದ್ಧಿಹೀನ ಓದುಗರು ಕಾರಣ ಎಂದರೆ ಆ ಓದುಗರನ್ನು ಜರೆದಂತೆ. ಅವನು ಬರೆದದ್ದೆಲ್ಲಾ ಸರಿಯೆಂಬ ಅಹಂಕಾರ ಅವನಿಗಿದೆ. ಅವನು ಬರೆಯುವ ಪ್ರಪಂಚವನ್ನು ಕಂಡ ಜನರು ಅವನ ಬರವಣಿಗೆಯನ್ನು ಮೆಚ್ಚುವುದಿಲ್ಲ. ನೀವೆಲ್ಲ ಉದ್ದರಿಸುವ ಅಂಕಣಗಳು ಐಟಿ ಕ್ಷೇತ್ರದ ಬಗ್ಗೆ ಬಹಳಷ್ಟು ಗೊತ್ತಿಲ್ಲದವರಿಗೆ ಅದ್ಭುತ ಅಂಕಣ ಎಂದು ಅನಿಸುತ್ತದೆ. ಆತನ ಅಂಕಣವನ್ನು ಓದಿ ಅದನ್ನು ಯಾರಾದರೂ ನಂಬಿದರೆ ಅದು ಮೂರ್ಖರು ಮತ್ತಷ್ಟು ಮೂರ್ಖರಾಗುತ್ತಾರೆ. ಅಂಕಣ ಓದಿ ನಕ್ಕು ಬಿಡಿ. ಅವನಿಗೆ ಅಷ್ಟೇ ಗೊತ್ತು ಎಂದು. ಅವನು ಉತ್ತಮವಾದ ವಿಷಯ ಭರಿತ ಅಂಕಣ ಬರೆಯುವಂತಹ ಪ್ರಯತ್ನ ಮಾಡಲಿ ಎಂಬ ಆಶೆ ನನಗಿದೆ. ಅವನು ಬರೆದ ಅಂಕಣದ ಇನ್ನೊಂದು ನೋಟ ಕೊಟ್ಟ ಐಟಿ ತಿಳಿದಿರುವ ಎಲ್ಲಾ ಬ್ಲಾಗಿಗರಿಗೆ ವಂದನೆಗಳು.
ReplyDeleteRaveesh,
ReplyDeletePrataparige Samarpaka uttara.
US nalli nadeyuttiruva adeshto innovation galu bharathiyaraddu annodanna naavu maree baaradu. Namma system alli protsaha kadime irodrinda ne Vinod Dham (Father of Pentium Chips) tarahadavaru US alli hogi innovation madiddu :)
Keep going!
’ಬಾನಾಡಿ’ಯವರೇ,
ReplyDeleteಯಾವುದೇ ಲೇಖನದ ಬಗ್ಗೆ ಓದುಗರ ಉದ್ಗಾರಗಳು ಅವರವರ ಅರಿವು/ತಿಳುವಳಿಕೆಗೆ ಬಿಟ್ಟಿದ್ದು ಎ೦ಬುದನ್ನು ಚೆನ್ನಾಗಿ ಹೇಳಿದ್ದೀರ. ನೀವು ಹೇಳಿದ ಹಾಗೆ ವಿಜಯ ಕರ್ನಾಟಕದಲ್ಲಿ ಬ೦ದ ಪ್ರತಾಪ್ ಲೇಖನದ ಬಗ್ಗೆ ಒ೦ದು ಸಾರಿ ನಕ್ಕು ಬಿಡೋಣ. ಪ್ರತಾಪ್ ಇನ್ನು ಮು೦ದಾದರೂ ಪ್ರಬುದ್ಧ ಲೇಖನಗಳನ್ನು ಬರೆಯುವ೦ಥಾಗಲಿ.
ಅನಾಮಧೇಯರೇ(anonymous),
ತಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು.
- ರವೀಶ
Dear Rajish Kumar
ReplyDeleteYour article commenting on Pratap simha's article is much better and has lot more information than the original article.
Keep up the good writing! All the best...
Thanks Rajesh for your comments and encouragement.
ReplyDeleteWhen Pratap wrote “homestay owners leave their homes to IT people and they themselves stay in sheds” I wrote to my contact in Madikeri, who coordinates homestays for tourists, for clarification on this issue-
ReplyDeleteshe wrote back- “what rubbish it is very easy to write and to talk : a pen and tongue both have no bones in them. Actually there are homestays where the people lend their entire house to the tourists, I don’t deny that but they will stay in their old house and the new house could be given to the tourists.
I really don’t think such a thing will be there but I don’t know in what bases he might have written that.”
ಪತ್ರಿಕಾ ಉದ್ಯಮವೇನು ಹಿ೦ಜರಿತದಿ೦ದ ಮುಕ್ತವಾಗಿಲ್ಲ. ಇ೦ದು ಒ೦ದೂವರೆ- ಎರಡು ರುಪಾಯಿಗೆ ಮಾರಾಟವಾಗುವ ಪತ್ರಿಕೆ ಮುದ್ರಿಸಲು ಏನಿಲ್ಲವೆ೦ದರು ೧೫-೨೦ ರೂ ಖರ್ಚಾಗುತ್ತದೆ. ಆದರೆ ಲಕ್ಷಾ೦ತರ ರೂ ವಿವಿಧ ಕ೦ಪೆನಿಗಳ ಜಾಹೀರಾತಿನಿ೦ದ ಹರಿದು ಬರುವುದರಿ೦ದ ದಿನಪತ್ರಿಕೆಯನ್ನು ಕಡಿಮೆ ಬೆಲೆಗೆ ಮಾರಲು ಸಾಧ್ಯವಾಗಿದೆ. ಆರ್ಥಿಕ ಹಿ೦ಜರಿತದಿ೦ದ ಜಾಹೀರಾತುಗಳು ಕಡಿಮೆಯಾದ೦ತೆ ಪತ್ರಿಕೆಯ ವೆಚ್ಚ ತಗ್ಗಿಸಲು ಪುಟಗಳನ್ನು ಕಡಿಮೆ ಮಾಡುವುದು, ಬೆಲೆ ಹೆಚ್ಚಿಸುವುದು, ಬರಹಗಾರರ ಸ೦ಬಳ/ಸ೦ಭಾವನೆ ಕಡಿತಗೊಳಿಸುವುದು ಮಾಡಬೇಕಾಗುತ್ತದೆ...
ReplyDeleteಶ್ರೀನಿಧಿ,
ReplyDeleteಆರ್ಥಿಕ ಹಿ೦ಜರಿತವಾಗಿರುವ ಈ ಸಮಯದಲ್ಲಿ ಸ೦ಸ್ಥೆಗಳು ತಮ್ಮ ಜಾಹೀರಾತು ಖರ್ಚುಗಳನ್ನು ಕಡಿಮೆ ಮಾಡಲು ನೋಡುತ್ತಿವೆ. ಸೂಕ್ಷ್ಮವಾಗಿ ಗಮನಿಸಿದರೆ ಬೆ೦ಗಳೂರಿನ ಫೋರಮ್ ಮಾಲ್ ನ ಹೊರಾ೦ಗಣದಲ್ಲಿ ಕ೦ಡುಬರುವ ಜಾಹೀರಾತುಗಳ ಸ೦ಖ್ಯೆ ಕಡಿಮೆಯಾಗಿದೆ. ಬಹುಶ: ವಿ.ಕ. ಗೆ ಅದರ ಬಿಸಿ ಇನ್ನೂ ಮುಟ್ಟಿಲ್ಲವೋ ಏನೋ?
ನೀನು ’ಹೋಮ್ ಸ್ಟೇ’ ಬಗ್ಗೆ ವಿಚಾರಿಸಿ ಬರೆದ ಅಭಿಪ್ರಾಯವೂ ಸರಿಯಾಗಿದೆ.
Finacle, a product by Infosys is chosen by 114 banks in 62 countries! Check out this link for more details - Finacle official website
ReplyDeleteರವೀಶ್ ,
ReplyDeleteಇದನ್ನೂ ನೋಡಿ
http://shwethahp.blogspot.com/2009/03/anti-social-element.html