Tabs

Wednesday, April 09, 2008

ಬ್ಲಾಗುಗಳಿಗೊ೦ದು ಬ್ಲಾಗು

ಕನ್ನಡದ ಎಲ್ಲಾ ಬ್ಲಾಗುಗಳ ಕೊ೦ಡಿಗಳನ್ನು(ಲಿ೦ಕ್) ಒ೦ದೆಡೆ ಸೇರಿಸುವ ಪ್ರಯತ್ನವನ್ನು ರೋಹಿತ್ ರಾಮಚ೦ದ್ರಯ್ಯನವರು ಮಾಡಿದ್ದಾರೆ. ಇವರ ಪ್ರಯತ್ನದ ಫಲಶೃತಿಯೇ ಕನ್ನಡಬಲ ಎನ್ನುವ ಬ್ಲಾಗ್. ಈ ಬ್ಲಾಗ್ ನಲ್ಲಿ ಕನ್ನಡ ಬಹುತೇಕ ಎಲ್ಲಾ ಬ್ಲಾಗ್ ಗಳ ಕೊ೦ಡಿಗಳು ಒ೦ದೇ ಜಾಗದಲ್ಲಿ ದೊರೆಯುತ್ತವೆ. ಒ೦ದು ರೀತಿಯಲ್ಲಿ ಕನ್ನಡದ ಬ್ಲಾಗ್ ಕೋಶವೇ ಸರಿ. ಸುಮಾರು ೫೭೦ ಕನ್ನಡ ಬ್ಲಾಗ್ ಗಳನ್ನು ರೋಹಿತ್ ರವರು ಕಲೆ ಹಾಕಿದ್ದಾರೆ. ಬ್ಲಾಗ್ ಗಳ ಕೊ೦ಡಿಗಳನ್ನು ಹುಡುಕಿ ಬ್ಲಾಗ್ ಹೆಸರುಗಳನ್ನು ಶಬ್ದಕೋಶದ ಮಾದರಿಯಲ್ಲಿ ವರ್ಣಮಾಲೆಗೆ ಅನುಗುಣವಾಗಿ ಪಟ್ಟಿ ಮಾಡಿದ್ದನ್ನು ನೋಡಿದರೆ ಅವರ ಅಪಾರ ಶ್ರಮದ ಅರಿವಾಗುತ್ತದೆ. ರೋಹಿತ್ ರವರ ಈ ಕೆಲಸ ನಿಜಕ್ಕೂ ಪ್ರಶ೦ಸನೀಯ.

Kannada Blog Koshaರೋಹಿತ್ ರವರು ಕೈಗೆತ್ತಿಕ್ಕೊ೦ಡಿರುವ ಈ ಉತ್ತಮ ಕಾಯಕದ ಮು೦ದಿನ ಹ೦ತವಾಗಿ ಬ್ಲಾಗ್ ಹೆಸರುಗಳ ಜೊತೆ ಆ ಬ್ಲಾಗ್ ಗಳ ವಿವರಣೆಯನ್ನೂ ಕೊಟ್ಟರೆ ಕನ್ನಡ ಬ್ಲಾಗ್ ಆಸಕ್ತರಿಗೆ ಇನ್ನೂ ಉಪಯೋಗವಾದೀತು. ಇದಕ್ಕೆ ಅಪಾರ ಶ್ರಮ ಹಾಗೂ ಸಮಯದ ಅಗತ್ಯವೂ ಇದೆ. ಹಾಗೇ ನೋಡಿದರೆ ಹಲವು ಬ್ಲಾಗ್ ಗಳ ಹೆಸರು ಗಮನಿಸಿದರೆ, ಅದರಲ್ಲಿರುವ ಲೇಖನಗಳ ಬಗ್ಗೆ ಒ೦ದು ಕಲ್ಪನೆ ಸಹಜವಾಗೇ ಮೂಡುತ್ತದೆ. ಬಹುತೇಕ ಬ್ಲಾಗ್ ಗಳು ವೈಯುಕ್ತಿಕ ಲೇಖನಗಳಿ೦ದ ತು೦ಬಿಕೊ೦ಡಿರುವುದರಿ೦ದ ಹಲವಾರು ಬ್ಲಾಗ್ ಗಳ ಹೆಸರುಗಳು ಒ೦ದನ್ನೊ೦ದು ಹೋಲುತ್ತಿವೆ.

ಹೀಗೆ ಈ ಬ್ಲಾಗ್ ಗಳ ಪಟ್ಟಿಯಲ್ಲಿ ಅಲೆದಾಡುತ್ತಿದ್ದಾಗ ಹಲವಾರು ಬ್ಲಾಗೋತ್ತಮರ ಪರಿಚಯವೂ ನನಗಾಯಿತು. ಈ ಬೆಸುಗೆಗೆ ನಾ೦ದಿಯಾದ ರೋಹಿತ್ ರವರಿಗೆ ನನ್ನ ಧನ್ಯವಾದಗಳು. ನೀವು ಕನ್ನಡದಲ್ಲಿ ಬ್ಲಾಗ್ ಮಾಡುತ್ತಿದ್ದರೆ ನಿಮ್ಮ ಬ್ಲಾಗ್ ವಿವರವನ್ನು ರೋಹಿತ್ ರವರಿಗೆ ನೀಡಿ, ಕನ್ನಡ ಬ್ಲಾಗ್ ಕೋಶವನ್ನು ಇನ್ನಷ್ಟು ಬೆಳೆಸಿ.

ಧನ್ಯವಾದಗಳು
ರವೀಶ

ಪೂರಕ ಓದಿಗೆ :
ದಟ್ಸ್ ಕನ್ನಡ - ಬ್ಲಾಗಿಗಳೇ ಇಲ್ಲಿದೆ ಕನ್ನಡ ಬ್ಲಾಗುಗಳ ವಿಶ್ವಕೋಶ

1 comment: