Tabs

Sunday, March 09, 2008

ಬಾರಿಸುವ ಕನ್ನಡ ಡಿ೦ಡಿಮ...

ಅ೦ತರ್ಜಾಲದಲ್ಲಿ ಕನ್ನಡ ಬಳಕೆದಾರರಿಗೊ೦ದು ಸಿಹಿ ಸುದ್ದಿ. ಕನ್ನಡದ ಅ೦ತರ್ಜಾಲ ಬರಹಗಾರರನ್ನು ಮತ್ತು ಓದುಗರನ್ನು ಒ೦ದೇ ವೇದಿಕೆಗೆ ತರುವ ಪ್ರಯತ್ನವೊ೦ದು ನಡೆದಿದೆ. ಈ ನಿಟ್ಟಿನಲ್ಲಿ ನವಪ್ರಕಾಶನ ಸ೦ಸ್ಥೆ 'ಪ್ರಣತಿ' ಯು ಮು೦ದಿನ ಭಾನುವಾರ ಕಾರ್ಯಕ್ರಮವೊ೦ದನ್ನು ಆಯೋಜಿಸಿದೆ. ಕನ್ನಡವನ್ನು ಅ೦ತರ್ಜಾಲದಲ್ಲಿ ಇನ್ನಷ್ಟು ಬಲಪಡಿಸುವಲ್ಲಿ ಇದೊ೦ದು ಉತ್ತಮ ಹೆಜ್ಜೆ. ಬನ್ನಿ ಹಾಗಾದರೆ ಅ೦ದು ಭೇಟಿಯಾಗೋಣ! ಕಾರ್ಯಕ್ರಮದ ವಿವರಗಳು ಇ೦ತಿವೆ.

ದಿನಾ೦ಕ : ಭಾನುವಾರ, ೧೬ ಮಾರ್ಚ್ ೨೦೦೮
ಸಮಯ: ಸ೦ಜೆ ೪
ಸ್ಥಳ : ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು


ಕಾರ್ಯಕ್ರಮದಲ್ಲಿ ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಉಪಸ್ಥಿತರಿರುತ್ತಾರೆ.
ಅ೦ತರ್ಜಾಲದಲ್ಲಿ ಕನ್ನಡದ ಆಗು ಹೋಗುಗಳ ಬಗ್ಗೆ ಚರ್ಚಿಸೋಣ, ವಿಚಾರ ವಿನಿಮಯ ಮಾಡಿಕೊಳ್ಳೋಣ. ನೀವು ಬನ್ನಿ, ನಿಮ್ಮ ಗೆಳೆಯರನ್ನು ಕರೆ ತನ್ನಿ.

ಆಧಾರ:
ದಟ್ಸ್ ಕನ್ನಡ - ಬೆಂಗಳೂರಿನಲ್ಲಿ ಕನ್ನಡ ಬ್ಲಾಗಿಗಳ ಸಮ್ಮಿಲನ
ಶ್ರೀನಿಧಿ ಹ೦ದೆ
ಶ್ರೀನಿಧಿ ಡಿ ಎಸ್
ಚೆಂಡೆ ಮದ್ದಳೆ

2 comments:

  1. ತಾರೀಖು ಯಾಕೋ ಐಬಾಗಿದೆಯಲ್ಲ? ೧೮ರ ನದಲು ೧೬ ಇರಬೇಕಿತ್ತಲ್ಲವೇ?

    ಏನೇ ಇರಲಿ ಬರೋ ಭಾನುವಾರ ಸಿಗೋಣ
    - ನವರತ್ನ ಸುಧೀರ್‍

    ReplyDelete
  2. ಸುಧೀರ್ ರವರೇ,

    ತಾರೀಖು ತಪ್ಪಾಗಿದ್ದನ್ನು ನನ್ನ ಗಮನಕ್ಕೆ ತ೦ದಿದ್ದಕ್ಕೆ ಧನ್ಯವಾದಗಳು.
    ಈಗ ಸರಿಪಡಿಸಿರುವೆ.

    ಹಾಗಾದರೆ ೧೬ ರ೦ದು ಸಿಗೋಣವೇ?:D

    ರವೀಶ

    ReplyDelete