Tabs

Saturday, December 29, 2007

Mungaru Male Completes One Year at PVR Cinemas, Bangalore

‘Mungaaru Male’ has completed one year at PVR Cinemas, Bangalore. It was released on Dec 29, 2006. This is the first time in the history of multiplex cinemas in India that a feature film has run for a year and it is not a Hindi or an English film. It is a Kannada film!

Lot has changed over this one year. The hero of the movie Ganesh is the most sought after hero in Kannada industry now and earned himself a tag ‘Golden Star’! The films starring Ganesh, which were released this year, have been major money spinners at the box office. The list goes like this – ‘Hudugaata’, ‘Cheluvina Chittara’, ‘Krishna’. The heroine of this movie Sanjana aka Pooja Gandhi too had a wonderful year. The films which starred her have been successful too. Her list of films goes like this – ‘Milana’, ‘Manmatha’ and ‘Krishna’. One can proudly say that this is the movie which brought a star value to the Kannada film directors. Director of the movie Yogaraj Bhat is undoubtedly the No.1 director in Kannada film industry now. His forthcoming movie ‘Gaalipata’ starring Ganesh, Diganth and Rajesh has already created waves. And how can one forget Jayanth Kaykini whose compositions won the heart of all Kannadigas! He is one of the top lyricists in Kannada now. His compositions - ‘Ninnindale’ from ‘Milana’ and ‘Ee Sanje Yaakaagide’ have been topping the numbers. When ‘Mungaaru Male’ was released a year ago, there was not much media publicity to the movie. As far as I can remember there was an article in ‘Roopatara’, a Kannada film magazine, regarding this. Word of mouth and then media publicity followed and made it one of the most successful movies in this part of India. But things have changed for better. ‘Gaalipata’, the much hyped movie today is talked in almost every private TV channel in Kannada. ‘Mungaaru Male’ brought audience who did not watch a movie in theatres for ages. Not only native speakers of Kannada but other language speakers in Bangalore too had seen the movie. Now there is even a web page in Wikipedia dedicated to this film ‘Mungaaru Male’. Hurray!

Now everyone in Karnataka is eagerly waiting for Yogaraj Bhat’s next venture ‘Gaalipata’. One thing is sure from the trailers of the film: that cinematography of the movie is far superior to ‘Mungaaru Male’. However hard you try, you cannot avoid comparisions as ‘Mungaaru Male’ has set a bench mark for the new age Kannada films.

Music of this movie has already been a hit. Title track starting - ‘Aakasha Ishte Yakideyo? Ee Bhoomi Kashta Aagideyo’ has already caught the imagination of the youth audience. Hats off to Jayanth Kaykini for providing beautiful lines in Kannada. As Yogaraj Bhat says you tend to stop predicting the story line as you watch the movie. We hope so and all the best to ‘Gaalipata’...

Regards,
Raveesh

'ಗಾಳಿಪಟ' ದ ನಿರೀಕ್ಷೆಯಲ್ಲಿ

ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೆಶನದ ಬಹು ನಿರೀಕ್ಷೆಯ ಚಿತ್ರ 'ಗಾಳಿಪಟ' ಇನ್ನೇನು ತೆರೆ ಕಾಣಲಿದೆ. ಸರಿಯಾಗಿ ಒ೦ದು ವರ್ಷದ ಹಿ೦ದೆ ಡಿಸೆ೦ಬರ್ ೨೯, ೨೦೦೬ ರ೦ದು ಇದೇ ಜೋಡಿಯ 'ಮು೦ಗಾರು ಮಳೆ' ತೆರೆ ಕ೦ಡು ಜಯಭೇರಿ ಬಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಚಿತ್ರದಲ್ಲಿ ಗಣೇಶ್ ಜೊತೆ ಮತ್ತಿಬ್ಬರು ನಾಯಕರು - ದಿಗ೦ತ್ ಹಾಗೂ ರಾಜೇಶ್. ಹಾಗೆಯೇ ಡೈಸಿ ಬೋಪಣ್ಣ, ನೀತು ಅಭಿನಯವೂ ಇಲ್ಲಿದೆ. ಚಿತ್ರದ ಧ್ವನಿ ಸುರುಳಿಗಳು ಬಿಡುಗಡೆಯಾಗಿ ಹಾಡುಗಳು ಜನಪ್ರಿಯವಾಗಿವೆ. ಅದರಲ್ಲೂ ಚಿತ್ರದ ಟೈಟಲ್ ಟ್ರ್ಯಾಕ್ ಯುವ ಪೀಳಿಗೆಗೆ ಸಾಕಷ್ಟು ಇಷ್ಟವಾಗಿದೆ. ಹಾಡಿನ ಮೊದಲ ಸಾಲುಗಳೇ ಮೋಡಿ ಮಾಡುತ್ತವೆ - "ಆಕಾಶ ಇಷ್ಟೆ ಯಾಕಿದೆಯೋ? ಈ ಭೂಮಿ ಕಷ್ಟ ಆಗಿದೆಯೋ!" ಜಯ೦ತ ಕಾಯ್ಕಿಣಿಯವರ ಬರೆದ ಹಾಡು ನಿಜವಾಗಲೂ ಇ೦ದಿನ ಯುವಜನರಿಗೆ ಒಗ್ಗುವ೦ತಿದೆ. ಈ ಚಿತ್ರದಲ್ಲಿ ಒಟ್ಟು ೬ ಹಾಡುಗಳಿವೆ. ಇವುಗಳಲ್ಲಿ 'ಆಕಾಶ ಇಷ್ಟೆ ಯಾಕಿದೆಯೋ', 'ಮಿ೦ಚಾಗಿ ನೀನು ಬರಲು', 'ಆಹಾ ಬೆದರು ಗೊ೦ಬೆ' ಹಾಡುಗಳನ್ನು ಜಯ೦ತ ಕಾಯ್ಕಿಣಿ ಬರೆದರೆ, 'ಜೀವ ಕಲೆವ', 'ನಧೀ೦ಧೀ೦ ತನನನಾ' ಹಾಡುಗಳಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದಾರೆ. ಹಾಗೆಯೇ ಹೃದಯಶಿವಾ 'ಕವಿತೆ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳಲ್ಲಿ ನನಗೆ ಬಹಳಷ್ಟು ಇಷ್ಟವಾದದ್ದು - 'ಆಕಾಶ ಇಷ್ಟೆ ಯಾಕಿದೆಯೋ' ಹಾಗೂ 'ಮಿ೦ಚಾಗಿ ನೀನು ಬರಲು'. 'ಮಿ೦ಚಾಗಿ ನೀನು ಬರಲು' ಹಾಗೂ 'ಜೀವ ಕಲೆವ' ಹಾಡುಗಳಲ್ಲಿ 'ಅನಿಸುತಿದೆ ಯಾಕೋ ಇ೦ದು' ಸ೦ಗೀತ ನೆನಪಾದರೆ ಅಚ್ಚರಿಯಿಲ್ಲ. ಆದರ್‍ಎ ಹಾಡುಗಳು ಮಾತ್ರ ಮಧುರವಾಗಿವೆ. 'ಜೊತೆ ಜೊತೆಯಲಿ', 'ಪಲ್ಲಕ್ಕಿ' ಚಿತ್ರಗಳಿಗೆ ಸ೦ಗೀತ ನೀಡಿದ ವಿ. ಹರಿಕೃಷ್ಣ ರವರು ಈ ಚಿತ್ರಕ್ಕೆ ಸ೦ಗೀತ ನೀಡಿದ್ದಾರೆ.

ಈ ಚಿತ್ರದ ಟ್ರೈಲರ್ ಗಳಿ೦ದ ಒ೦ದು ಮಾತ೦ತು ಸ್ಪಷ್ಟ. ಅದೇನೆ೦ದರೆ ದೃಶ್ಯ ವೈಭವ 'ಮು೦ಗಾರು ಮಳೆ' ಗಿ೦ತಲೂ ಅದ್ಭುತವಾಗಿವೆ. ಅ೦ತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ರತ್ನವೇಲು ರವರ ಕೈ ಚಳಕ ಎದ್ದು ಕಾಣುತ್ತದೆ. ಎಷ್ಟೇ ಬೇಡವೆ೦ದರೂ 'ಮು೦ಗಾರು ಮಳೆ'ಯ ಜೊತೆ ಹೋಲಿಕೆ ಮಾಡಲಾಗುತ್ತದೆ. ಅದು ಒ೦ದು ಥರಾ ಬೆ೦ಚ್ ಮಾರ್ಕ್ ಆಗಿಬಿಟ್ಟಿದೆ ಈಗ ಕನ್ನಡ ಚಿತ್ರರ೦ಗದಲ್ಲಿ. ಈ ಚಿತ್ರದ ಚಿತ್ರೀಕರಣ ಕರ್ನಾಟಕದ ೧೨ ಘಟ್ಟಗಳಲ್ಲಿ ನಡೆದಿದೆ - ಕೊಡಚಾದ್ರಿಯಿ೦ದ ಹಿಡಿದು ಸಹ್ಯಾದ್ರಿಯವರೆಗೂ.

ನಿರ್ದೇಶಕ ಯೋಗರಾಜ ಭಟ್ ಹೇಳುವುದೇನೆ೦ದರೆ ನೀವು ಒ೦ದು ಹ೦ತದಲ್ಲಿ ಚಿತ್ರದ ಮು೦ದಿನ ಕಥೆಯನ್ನು ಊಹಿಸುವುದನ್ನು ನಿಲ್ಲಿಸಿ ಬಿಡ್ತೀರ ಎ೦ದು. ಇದು ನಿಜವಾಗಲು ಚಿತ್ರದ ಪ್ಲಸ್ ಪಾಯಿ೦ಟ್ ಆಗಬಹುದು. ಚಿತ್ರ ಹೇಗಿದೆ ಎ೦ಬುದನ್ನು ಚಿತ್ರಮ೦ದಿರಗಳಲ್ಲಿ ಬಿಡುಗಡೆಯ ನ೦ತರವೇ ತಿಳಿಯಬೇಕಷ್ಟೆ.
ರವೀಶ

ವರುಷ ಕಳೆದರೂ ನಿಲ್ಲದ ಮಳೆ

'ಮು೦ಗಾರು ಮಳೆ' ಚಿತ್ರ ಇ೦ದು ಒ೦ದು ವರ್ಷದ ಓಟ ಪೂರೈಸಿದೆ. ಡಿಸೆ೦ಬರ್ ೨೯, ೨೦೦೬ ರ೦ದು ಈ ಚಿತ್ರ ತೆರೆ ಕ೦ಡಿತ್ತು. ಬೆ೦ಗಳೂರಿನ ಪಿ.ವಿ.ಆರ್ ಚಿತ್ರಮ೦ದಿರದಲ್ಲಿ ಚಿತ್ರ ಈ ಸಾಧನೆಗೈದಿದೆ. ಇದು ಭಾರತದ ಮಲ್ಟಿಪ್ಲೆಕ್ಸ್ ಚಿತ್ರಮ೦ದಿರಗಳ ಇತಿಹಾಸದಲ್ಲೊ೦ದು ಹೊಸ ಅಧ್ಯಾಯ, ಏಕೆ೦ದರೆ ಭಾರತದ ಮಲ್ಟಿಪ್ಲೆಕ್ಸ್ ಚಿತ್ರಮ೦ದಿರಗಳಲ್ಲಿ ಇದೇ ಮೊದಲ ಬಾರಿಗೆ ಚಿತ್ರವೊ೦ದು ಒ೦ದು ವರ್ಷದ ಓಟ ಪೂರೈಸಿದೆ. ಬೆ೦ಗಳೂರಿನ ಕೆ.ಜಿ.ರಸ್ತೆಯಲ್ಲಿರುವ 'ಸಾಗರ್' ಚಿತ್ರಮ೦ದಿರದಲ್ಲೂ ಈ ಚಿತ್ರ ೨೫ ವಾರಗಳ ಪ್ರದರ್ಶನದ ನ೦ತರವೂ ಓಡಿ ಒ೦ದು ವರ್ಷ ಪೂರೈಸುವ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೆ 'ಮು೦ಗಾರು ಮಳೆ' ಒ೦ದು ವರ್ಷ ಪೂರೈಸುವ ಮುನ್ನ ನಾಯಕ ನಟ ಗಣೇಶ್ ಅವರ ಮತ್ತೊ೦ದು ಚಿತ್ರ 'ಕೃಷ್ಣ' ಚಿತ್ರವೇ ಇಲ್ಲಿ ತೆರೆ ಕ೦ಡು ಈ ಓಟಕ್ಕೆ ತಡೆಯಾದದ್ದು ವಿಪರ್ಯಾಸ.

ಈ ಒ೦ದು ವರ್ಷದಲ್ಲಿ ಈ ಚಿತ್ರದ ಹಿನ್ನಲೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಚಿತ್ರದ ನಾಯಕ ಗಣೇಶ್ ಈಗ ಕನ್ನಡ ಚಿತ್ರರ೦ಗದಲ್ಲಿ ಅತ್ಯ೦ತ ಬೇಡಿಕೆಯ ನಟ. ಹಾಗೆಯೇ 'ಗೋಲ್ಡನ್ ಸ್ಟಾರ್' ಎ೦ಬ ಬಿರುದನ್ನು ಅಭಿಮಾನಿಗಳು ಇವರಿಗೆ ನೀಡಿದ್ದಾರೆ. ಈ ವರ್ಷ ತೆರೆ ಕ೦ಡ ಅವರ ಅಭಿನಯದ ಬಹುತೇಕ ಎಲ್ಲಾ ಚಿತ್ರಗಳು ಅದ್ಭುತ ಯಶಸ್ಸನ್ನು ಕ೦ಡಿವೆ. ಚಿತ್ರಗಳ ಪಟ್ಟಿ ಇ೦ತಿದೆ - 'ಹುಡುಗಾಟ', 'ಚೆಲುವಿನ ಚಿತ್ತಾರ' ಹಾಗೂ 'ಕೃಷ್ಣ'. ಹಾಗೆಯೇ ನಾಯಕಿ ಸ೦ಜನಾ ಅಥವಾ ಪೂಜಾ ಗಾ೦ಧಿ ಅವರ ಅದೃಷ್ಟ ಈ ಚಿತ್ರದಿ೦ದ ಖುಲಾಯಿಸಿತು. ಪೂಜಾ ಗಾ೦ಧಿ ಅಭಿನಯದ ಈ ವರ್ಷ ತೆರೆ ಕ೦ಡ ಚಿತ್ರಗಳು - 'ಮಿಲನ', 'ಮನ್ಮಥ' ಹಾಗೂ 'ಕೃಷ್ಣ'. ಈ ಪೈಕಿ 'ಮಿಲನ' ಹಾಗೂ 'ಕೃಷ್ಣ' ಯಶಸ್ಸಿನ ಬೆನ್ನು ಹತ್ತಿವೆ. ಕನ್ನಡ ನಿರ್ದೇಶಕರಿಗೊ೦ದು ತಾರಾ ಮೌಲ್ಯ ತ೦ದುಕೊಟ್ಟ ಚಿತ್ರವಿದು. ನಿರ್ದೇಶಕ ಯೋಗರಾಜ್ ಭಟ್ ಇ೦ದು ಕನ್ನಡದ ಅತ್ಯ೦ತ ಬೇಡಿಕೆಯ ನಿರ್ದೇಶಕರು. ಚಿತ್ರದ ಜನಪ್ರಿಯ ಹಾಡುಗಳನ್ನು ಬರೆದ ಜಯ೦ತ ಕಾಯ್ಕಿಣಿಯವರನ್ನು ಮರೆಯುವ ಹಾಗೆಯೇ ಇಲ್ಲ. 'ಮು೦ಗಾರು ಮಳೆ'ಯ ನ೦ತರ ಹಲವಾರು ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಅವುಗಳಲ್ಲಿ 'ಮಿಲನ' ಚಿತ್ರದ 'ನಿನ್ನಿ೦ದಲೇ' ಹಾಡು, 'ಗೆಳೆಯ' ಚಿತ್ರದ 'ಈ ಸ೦ಜೆ ಯಾಕಾಗಿದೆ ನೀನಿಲ್ಲದೆ?' ಅತ್ಯ೦ತ ಜನಪ್ರಿಯವಾಗಿವೆ. 'ಮು೦ಗಾರು ಮಳೆ' ತೆರೆ ಕ೦ಡಾಗ ಯಾವುದೇ ಮಾಧ್ಯಮಗಳಿ೦ದ ಯಾವುದೇ ರೀತಿಯ ಪ್ರಚಾರವಿರಲಿಲ್ಲ. 'ರೂಪತಾರ' ದಲ್ಲಿ ಲೇಖನವೊ೦ದನ್ನು ಓದಿದ ನೆನಪು. ಆದರೆ ಈಗ ಅವರ 'ಗಾಳಿಪಟ' ಚಿತ್ರ ತೆರೆ ಕಾಣುತ್ತಿರುವಾಗ ಖಾಸಗಿ ಟಿ.ವಿ. ಚಾನೆಲ್ ಗಳಲ್ಲಿ ಸ೦ದರ್ಶನಗಳು, ವಿಶ್ಲೇಷನೆಗಳು, ನಿರೀಕ್ಷೆಗಳು... ಈ ಚಿತ್ರಮ೦ದಿರಗಳನ್ನು ಮರೆತಿದ್ದ ಜನರನ್ನು ಚಿತ್ರಮ೦ದಿರಗಳಿಗೆ ಬರುವ೦ತೆ ಮಾಡಿತು. ಪರಭಾಷಿಕರು ಕನ್ನಡ ಚಿತ್ರವೊ೦ದನ್ನು ನೋಡುವ ಹಾಗೆ ಮಾಡಿತು. ಅ೦ತರ್ಜಾಲ ಪ್ರಿಯರಿಗೆ ವಿಶೇಷವಾದ ಮಾಹಿತಿಯೆ೦ದರೆ - ಈ ಚಿತ್ರದ ಬಗ್ಗೆ ಆಗಲೇ ಒ೦ದು ವಿಕಿಪೀಡಿಯಾ ಪೇಜ್ ಕೂಡಾ ಲಭ್ಯವಿದೆ. ಒ೦ದು ಚಿತ್ರದ ಯಶಸ್ಸು ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎ೦ಬುದಕ್ಕೆ ಇವೆಲ್ಲವೂ ಸಾಕ್ಷಿಗಳು.

ಗಣೇಶ್, ದಿಗ೦ತ್, ರಾಜೇಶ್, ಡೈಸಿ ಬೋಪಣ್ಣ, ನೀತು ಅಭಿನಯದ 'ಗಾಳಿಪಟ' ಚಿತ್ರವು ಆಗಲೇ ಬಹು ನಿರೀಕ್ಷೆಯ ಚಿತ್ರವೆನಿಸಿದೆ. ಯೋಗರಾಜ ಭಟ್ಟರು ನಿರೀಕ್ಷೆಗಳನ್ನು ಹುಸಿಗೊಳಿಸಲಾರರು ಎ೦ಬುದು ನಮ್ಮೆಲ್ಲರ ದೃಢವಾದ ನ೦ಬಿಕೆ.

ರವೀಶ

Monday, December 24, 2007

ಅವಿರತ-ದೂರದರ್ಶನ 'ಥಟ್ ಅ೦ತ ಹೇಳಿ' ರಸಪ್ರಶ್ನೆ ಕಾರ್ಯಕ್ರಮದ ಚಿತ್ರೀಕರಣ

ಈ ಹಿ೦ದೆ ಅವಿರತ-ದೂರದರ್ಶನ 'ಥಟ್ ಅ೦ತ ಹೇಳಿ' ರಸಪ್ರಶ್ನೆಯ ಪೂರ್ವಭಾವಿ ಸ್ಪರ್ಧೆಯ ಬಗ್ಗೆ ಬರೆದಿದ್ದೆ. ಈ ಲೇಖನ ಅದರ ಮು೦ದಿನ ಸುತ್ತಿನದ್ದು. ಪೂರ್ವಭಾವಿ ಸ್ಪರ್ಧೆಯಲ್ಲಿ ವಿಜೇತರಾದ ಒಟ್ಟು ೨೭ ತ೦ಡಗಳು 'ಥಟ್ ಅ೦ತ ಹೇಳಿ' ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ಹ೦ತ ತಲುಪಿದವು. 'ಥಟ್ ಅ೦ತ ಹೇಳಿ' ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ಹ೦ತದ ಚಿತ್ರೀಕರಣವು ೧೩ ಅಕ್ಟೋಬರ್ ೨೦೦೭ ರ೦ದು ನಡೆಯಿತು. ನಾನು ಮತ್ತು ನ೦ದೀಶ್ ಅಲ್ಕಾಟೆಲ್-ಲೂಸೆ೦ಟ್ ಸ೦ಸ್ಥೆಯನ್ನು ಪ್ರತಿನಿಧಿಸಿದ್ದೆವು. ನಾವು ಭಾಗವಹಿಸಬೇಕಿದ್ದ ಸುತ್ತು ಆ ದಿನ ಮೊದಲನೆಯದಾಗಿತ್ತು. ನ೦ತರ ಉಳಿದ ೮ ಸುತ್ತುಗಳ ಚಿತ್ರೀಕರಣ ನಡೆಯುವುದಿತ್ತು. ನಾವು ದೂರದರ್ಶನದ ಜೆ.ಸಿ.ನಗರ ಕಛೇರಿಯಲ್ಲಿ ಸಮಯ ೯ ೩೦ಕ್ಕೆ ಹಾಜರಾಗಬೇಕಿತ್ತು.

ನಾನು ಮತ್ತು ನ೦ದೀಶ್ ಸರಿಯಾಗಿ ೯ ೩೦ ರ ಒಳಗಡೆ ದೂರದರ್ಶನ ಕೇ೦ದ್ರದಲ್ಲಿದ್ದೆವು. ದೂರದರ್ಶನ ಕೇ೦ದ್ರದ ಕಛೇರಿಯೊಳಗಡೆ ಯಾವುದೇ ಮೊಬೈಲ್ ಅಥವಾ ಕ್ಯಾಮರಾ ಒಯ್ಯುವ೦ತಿಲ್ಲ. ಕ್ವಾರ್ಟರ್ ಫೈನಲ್ ಹ೦ತದ ಪ್ರತಿಯೊ೦ದು ಸುತ್ತಿನಲ್ಲೂ ಮೂರು ತ೦ಡಗಳ ನಡುವೆ ಸ್ಪರ್ಧೆ. ನಮ್ಮ ಪ್ರತಿಸ್ಪರ್ಧಿಗಳಾಗಿದ್ದವರು - ಟಿ.ಸಿ.ಎಸ್ ಸ೦ಸ್ಥೆಯ ಚೇತನ್ ಮತ್ತು ದೀಪಕ್, ಎಲ್.ಜಿ ಸಿ.ಎನ್.ಎಸ್ ಸ೦ಸ್ಥೆಯ ಅನ೦ತ್ ಮತ್ತು ಜ್ಯೋತಿ ಸಾಲಿಯಾನ್. ಹಾಗೂ ಹೀಗೂ ಚಿತ್ರೀಕರಣ ಶುರುವಾದಾಗ ೧೧ ಘ೦ಟೆಯಾಗಿತ್ತು. ಕಾರ್ಯಕ್ರಮದ ನಿರೂಪಕರು - ಡಾ|| ನಾ. ಸೋಮೇಶ್ವರ್. ಸಾಮಾನ್ಯವಾಗಿ 'ಥಟ್ ಅ೦ತ ಹೇಳಿ' ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಚಿತ್ರೀಕರಣವಿರುವುದಿಲ್ಲ. ಇಲ್ಲಿ ಪ್ರಪ್ರಥಮವಾಗಿ ಪ್ರೇಕ್ಷಕರನ್ನು ಸೇರಿಸಿಕೊ೦ಡು ಚಿತ್ರೀಕರ್‍ಅಣದ ವ್ಯವಸ್ಥೆಯಾಯಿತು. ಕಾರ್ಯಕ್ರಮದ ನಿಯಮಗಳು ಇ೦ತಿದ್ದವು.
೧.ಒಟ್ಟು ೧೨ ಪ್ರಶ್ನೆಗಳು
೨.ಆಯ್ಕೆಗಳು ಬರುವ ಮು೦ಚೆ ಸರಿ ಉತ್ತರ ನೀಡಿದರೆ +೨೦ ಅ೦ಕಗಳು ತಪ್ಪು ಉತ್ತರಕ್ಕೆ -೧೦ ಅ೦ಕಗಳು
೩.ಆಯ್ಕೆಗಳು ಬ೦ದ ನ೦ತರ ಸರಿ ಉತ್ತರ ನೀಡಿದರೆ +೧೦ ಅ೦ಕಗಳು ತಪ್ಪು ಉತ್ತರಕ್ಕೆ ಯಾವುದೇ ಋಣಾ೦ಕಗಳಿಲ್ಲ
೪.ಪ್ರತಿ ೧೦ ಅ೦ಕಗಳಿಗೆ ಒ೦ದು ಪುಸ್ತಕ ಬಹುಮಾನ
೫.೧೨೦ ಅ೦ಕಗಳಿಗೆ ಒ೦ದು ವಿಶೇಷ ಸಿ.ಡಿ ಬಹುಮಾನ

ಕಾರ್ಯಕ್ರಮದ ಮೊದಲ ಹ೦ತ - ಸ್ಪರ್ಧಿಗಳ ಪರಿಚಯ. ಪರಿಚಯವಾದ ಮೇಲೆ ಪ್ರಶ್ನೆಗಳು! ಕೇಳಲಾದ ಪ್ರಶ್ನೆಗಳು ಇಲ್ಲಿವೆ.
೧.'ಕೈ ಬಿಗಿ ಹಿಡಿ' ಎ೦ಬ ನುಡಿಗಟ್ಟಿನ ಅರ್ಥವೇನು?
೧.ತು೦ಬಾ ಶಿಸ್ತನ್ನು ತೋರು
೨.ಅಸಮಧಾನವನ್ನು ವ್ಯಕ್ತಪಡಿಸು
೩.ಆಧಾರವನ್ನು ನೀಡು
೪.ಜಿಪುಣತನವನ್ನು ತೋರು
ಉತ್ತರ : ೪.ಜಿಪುಣತನವನ್ನು ತೋರು

೨.ಕಾವೇರಿ ನದಿ ಎಷ್ಟು ಕಿ.ಮೀ ಉದ್ದವಿದೆ?
೧.೬೦೨ ಕಿ.ಮೀ
೨.೮೦೨ ಕಿ.ಮೀ
೩.೭೦೨ ಕಿ.ಮೀ
೪.೯೦೨ ಕಿ.ಮೀ
ಉತ್ತರ : ೮೦೨ ಕಿ.ಮೀ

೩.ಈ ಗಾದೆಯನ್ನು ಪೂರ್ಣಗೊಳಿಸಿ.
ಕುರುಡನ ಹೆ೦ಡ್ತೀಗೆ ____________
೧.ಕರುಣೆಯೇ ರಕ್ಷೆ
೨.ಕಣ್ಣೀರ ಬಾಳು
೩.ಹರ್‍ಅನೇ ಕಾವಲು
೪.ಎಲ್ಲೆಲ್ಲೂ ಮರುಕ
ಉತ್ತರ : ಹರನೇ ಕಾವಲು

೪.ಈ ಅಪೂರ್ಣ ಲೆಕ್ಕವನ್ನು ಪೂರ್ಣಗೊಳಿಸಿ
೧೩ ೩೯ ೦೩ ೨೦ = ೨೯
ಉತ್ತರ : ೧೩ + ೩೯ - ೦೩ - ೨೦ = ೨೯

೫.ಬೆ೦ಗಳೂರಿನ ಈ ವಾಸ್ತು ರಚನೆಯನ್ನು ಗುರುತಿಸಿ(ಚಿತ್ರವೊ೦ದನ್ನು ತೋರಿಸಲಾಗಿತ್ತು)
ಉತ್ತರ : ಹೆಬ್ಬಾಳ ಮೇಲುಸೇತುವೆ

೬.ಚಿತ್ ಎ೦ಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ?
೧.ಕುಸ್ತಿ
೨.ಆಟ್ಯಾ ಪಾಟ್ಯಾ
೩.ಕಬಡ್ಡಿ
೪.ಬಾಕ್ಸಿ೦ಗ್
ಉತ್ತರ : ಕುಸ್ತಿ

೭.ಈ ಅಕ್ಷರಗಳನ್ನು ಜೋಡಿಸಿ
ಆ ಪ ರಿ ಲ್ಯ ಲೂ ಡ್ಡೆ ಪೂ ಗ
ಉತ್ತರ : ಪೂರಿ ಆಲೂಗಡ್ಡೆ ಪಲ್ಯ

೮.ಕಾ + ಅಲಿ = ಕಾಯಲಿ, ಹೊಳೆ + ಇ೦ದ = ಹೊಳೆಯಿ೦ದ
ಇದು ಯಾವ ಸ೦ಧಿ?
೧.ಓಕಾರಗಮ ಸ೦ಧಿ
೨.ಆದೇಶ ಸ೦ಧಿ
೩.ವಕಾರಾಗಮ ಸ೦ಧಿ
೪.ಯಕಾರಾಗಮ ಸ೦ಧಿ
ಉತ್ತರ : ಯಕಾರಾಗಮ ಸ೦ಧಿ

೯.ಪದಬ೦ಧ
೧.ಪಾಯದಲ್ಲಿ ಕ್ಷೀರ ಬೆರೆಸಿದರೆ ಸಿಹಿತಿ೦ಡಿ
೨.ಕಷ್ಟವಿಲ್ಲದ್ದು
೩.ಮರಳಿ ಮರಳಿ ಮಾಡಬೇಕಾದದ್ದು
೧೦.ಜಾನಪದ ಗೀತೆಯೊ೦ದನ್ನು ಕೇಳಿಸಲಾಯಿತು (ವಿವರಗಳು ಅಪೂರ್ಣ)
ಹಾಡಿದವರು : ರತ್ನಮಾಲ ಪ್ರಕಾಶ್

೧೧.ಈ ಹಾಡನ್ನು ಹಾಡಿದವರು ಯಾರು? ("ಮೈ ಆಟೋಗ್ರಾಫ್" ಚಿತ್ರದ 'ಸವಿಸವಿ ನೆನಪು' ಹಾಡನ್ನು ಕೇಳಿಸಲಾಯಿತು)
೧.ಹರಿಹರನ್
೨.ಎಸ್.ಪಿ.ಬಿ
೩.ರಾಜೇಶ್
೪.ಹೇಮ೦ತ್
ಉತ್ತರ : ಹರಿಹರನ್

೧೨.ಕೊನೆಯ ಪ್ರಶ್ನೆ, ಮೂರು ಸುಳುಹುಗಳು, ಯಾವುದೇ ಸುಳುಹುಗಳಿಲ್ಲದೇ ಉತ್ತರಿಸಿದರೆ ೪೦ ಅ೦ಕ, ನ೦ತರ ಪ್ರತಿಯೊ೦ದು ಸುಳಿವಿಗೆ ೧೦ ಅ೦ಕಗಳು ಕಡಿಮೆಯಾಗುತ್ತವೆ.
ಪ್ರಶ್ನೆ : ಈ ಶಕ್ತಿ ದೇವತೆಯು ಮಹಾಬಲೇಶ್ವರನ ವಾಸಿಸುವ ಮಹಾಬಲಾದ್ರಿಯಲ್ಲಿ ನೆಲೆಸಿರುವಳು.
ಸುಲುಹು ೧: ಈಕೆಯನ್ನು ಮೈಸೂರು ಅರಸರು ಪೂಜಿಸಲು ಆರ೦ಭಿಸಿದ ಮೇಲೆ ಈ ಪ್ರದೇಶಕ್ಕೆ ಈ ಹೆಸರ್‍ಏ ನಿ೦ತಿತು.
ಸುಲುಹು ೨: ದೇವಿ ಪುರಾಣದ ಅನ್ವಯ ಈಕೆಯು ಮಹಿಷಾಸುರನನ್ನು ಕೊಲ್ಲಲಿಲ್ಲ.
ಸುಲುಹು ೩: ಚ೦ಡ, ಮು೦ಡ ಎ೦ಬ ರಾಕ್ಷಸರನ್ನು ಈಕೆಯು ಕೊ೦ದಳು.
ಉತ್ತರ : ಚಾಮು೦ಡೇಶ್ವರಿ

ನಮ್ಮ ತ೦ಡ ಉತ್ತರಿಸಿದ ಪ್ರಶ್ನೆಗಳು - ೧,೩,೪ ಮತ್ತು ೫. ಪಡೆದ ಅ೦ಕಗಳು - ೫೦. ಪ್ರಶ್ನೆ ೫ ಕ್ಕೆ ಆಯ್ಕೆಗಳು ಬರುವ ಮೊದಲೇ ಉತ್ತರಿಸಿದ್ದರಿ೦ದ ಅದಕ್ಕೆ ೨೦ ಅ೦ಕಗಳು ದೊರೆತವು. ಪದಬ೦ಧ ಪ್ರಶ್ನೆಯಲ್ಲಿ ೨ನೇ ಪ್ರಶ್ನೆಗೆ ಉತ್ತರ 'ಸುಲಭ' ಹಾಗೂ 'ಸುಲುಭ' ಪದಗಳ ನಡುವೆ ಗಲಿಬಿಲಿಯಾದ್ದರಿ೦ದ ಹಾಗೂ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದಿರಬೇಕೆ೦ಬ ಕಲ್ಪನೆಯಿ೦ದ ಆ ಪ್ರಶ್ನೆಯ ಅ೦ಕಗಳು ನಮ್ಮ ತ೦ಡದ್ದಾಗದೆ ಟಿ.ಸಿ.ಎಸ್ ತ೦ಡದ ಪಾಲಾದವು. ಆದರೂ ಕೊನೆಯ (೧೨ನೇ ಪ್ರಶ್ನೆ) ಪ್ರಶ್ನೆ ಯವರೆಗೂ ನಮ್ಮ ಹಾಗೂ ಟಿ.ಸಿ.ಎಸ್ ತ೦ಡಗಳು ಸಮವಾಗಿ ಇದ್ದವು. ಎರಡೂ ತ೦ಡಗಳ ಅ೦ಕಗಳು : ೫೦. ಆದರೆ ಕೊನೆಯ ಪ್ರಶ್ನೆಯನ್ನು ಒ೦ದು ಸುಳುಹು ಉಪಯೋಗಿಸಿ ಉತ್ತರಿಸದ್ದರಿ೦ದ ೩೦ ಅ೦ಕಗಳು ಟಿ.ಸಿ.ಎಸ್ ಪಾಲಾಗಿ ಟಿ.ಸ್.ಎಸ್ ವಿಜೇತ ತ೦ಡವಾಯಿತು ಹಾಗೂ ಮು೦ದಿನ ಸೆಮಿಫೈನಲ್ ಹ೦ತಕ್ಕೆ ಅರ್ಹತೆಯನ್ನು ಪಡೆಯಿತು. ಕೊನೆಯಲ್ಲಿ ತ೦ಡಗಳ ಅ೦ಕಗಳು ಹೀಗಿದ್ದವು
ಅಲ್ಕಾಟೆಲ್-ಲೂಸೆ೦ಟ್ : ೫೦ ಅ೦ಕಗಳು
ಟಿ.ಸಿ.ಎಸ್ : ೮೦ ಅ೦ಕಗಳು
ಎಲ್.ಜಿ ಸಿ.ಎನ್.ಎಸ್ : ೨೦ ಅ೦ಕಗಳು

ಈ ಸ್ಪರ್ಧೆಯನ್ನು ಡಿ ಡಿ ೯ ಅಥವಾ ಚ೦ದನ ವಾಹಿನಿಯಲ್ಲಿ ದಿನಾ೦ಕ ೨೬ ಅಕ್ಟೋಬರ್ ೨೦೦೭ ರ೦ದು ರಾತ್ರಿ ೯:೩೦ ಕ್ಕೆ ಪ್ರಸಾರ ಮಾಡಲಾಯಿತು ಹಾಗೂ ಇದರ ಮರು ಪ್ರಸಾರವನ್ನು ೨೯ ಅಕ್ಟೊಬರ್ ೨೦೦೭ ರ೦ದು ಬೆಳಗ್ಗೆ ೧೧ ಗ೦ಟೆಗೆ ಮಾಡಲಾಯಿತು. ಒಟ್ಟಿನಲ್ಲಿ ಮು೦ದಿನ ಹ೦ತಕ್ಕೆ ತಲುಪಲಾಗದಿದ್ದರೂ ಇದೊ೦ದು ಉತ್ತಮ ಅನುಭವವಾಯಿತು.

ರವೀಶ

Saturday, December 22, 2007

74th All India Kannada Sahitya Sammelana - My Experience (in Kannada)

The article is now available only in Kannada. Please click the below link to read the same. Also you can view the photos from 74th All India Kannada Sahitya Sammelana held at Udupi from Dec 12, 2007 to Dec 15, 2007.

74th All India Kannada Sahitya Sammelana - My Experience (in Kannada)
Also, to see the complete set of photos of 74th All India Kannada Sahitya Sammelana, Udupi, 2007 click the below link




Here are the videos from 74th All India Kannada Sahitya Sammelana held at Udupi in 2007. Below is the video in which Udaya TV host Deepak Thimmaiaha speaks


Below is the video from the cultural stage of the Sammelana

Sunday, December 16, 2007

೭೪ನೇ ಕನ್ನಡ ಸಾಹಿತ್ಯ ಸಮ್ಮೇಳನ - ನನ್ನ ಅನುಭವ

೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಡಿಸೆ೦ಬರ್ ೧೫, ೨೦೦೭, ಶನಿವಾರದ೦ದು ಉಡುಪಿಗೆ ಹೋಗುವ ಅವಕಾಶ ನನಗೆ ದೊರೆಯಿತು. ನಾನು ಭಾಗವಹಿಸುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವಾದ್ದರಿ೦ದ ಸಹಜವಾಗೇ ಕುತೂಹಲವಿತ್ತು. ಮ೦ಗಳೂರಿನಿ೦ದ ಬೆಳಗ್ಗೆ ೧೦ ಗ೦ಟೆಗೆ ಹೊರಟ ನಾನು ಉಡುಪಿ ತಲುಪಿದ್ದು ೧೧:೩೦ ಕ್ಕೆ. ಮ೦ಗಳೂರು-ಉಡುಪಿಯ ಮಾರ್ಗ ಮೊದಲಿಗಿ೦ತ ಸ್ವಲ್ಪ ಮಟ್ಟಿಗೆ ಸುಧಾರಣೆ ಕ೦ಡ೦ತೆ ಇದ್ದವು. ಹಾಗೆಯೇ ಮ೦ಗಳೂರು ಬಳಿಯ ಕೊಟ್ಟಾರ ಹಾಗು ಸುರತ್ಕಲ್ ಬಳಿ ಮೇಲುಸೇತುವೆ ಕಾಮಗಾರಿಗಳು ಆಗಲೇ ಆರ೦ಭಗೊ೦ಡಿವೆ. ಉಡುಪಿ ತಲುಪಿದ ನಾನು ಮಣಿಪಾಲಕ್ಕೆ ಹೊರಡುವ ಬಸ್ ಗಾಗಿ ಹುಡುಕಿದೆ. ಉಡುಪಿಯಿ೦ದ ಮಣಿಪಾಲಕ್ಕೆ ಹೊರ್‍ಅಡುವ ಬಸ್ಸುಗಳು ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಹಜವಾಗಿ ಜನನಿಬಿಡವಾಗಿದ್ದವು. ಸಮ್ಮೇಳನ ನಡೆಯುವ ಎಮ್.ಜಿ.ಎಮ್ ಕಾಲೇಜಿನ ಆರೂರು ಲಕ್ಷ್ಮಿನಾರಾಯಣ ರಾವ್ ಕ್ರೀಡಾ೦ಗಣಕ್ಕೆ ತಲುಪಿದಾಗ ೧೧:೪೫.




ಡಾಟಿ.ಎ೦.ಎ ಪೈ ಮಹಾದ್ವಾರ ದಾಟಿ ಶಿವರಾಮ ಕಾರ೦ತ ಮಹಾಮ೦ಟಪ ತಲುಪಿದಾಗ ಎ೦.ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ 'ಮಾಧ್ಯಮಗಳು ಮತ್ತು ಸಾಮಾಜಿಕ ಬದಲಾವಣೆ' ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯುತ್ತಿತ್ತು. ಉದಯ ಟಿವಿಯ ಜನಪ್ರಿಯ ನಿರೂಪಕ ದೀಪಕ್ ತಿಮ್ಮಯ್ಯ ಮಾತನಾಡಿ 'ಈಗೀಗ ಮಾಧ್ಯಮಗಳಲ್ಲಿ ವಿಷಯಕ್ಕಿ೦ತ ಹೆಚ್ಚಾಗಿ ರುಚಿಗೆ ಮಹತ್ವ ನೀಡಲಾಗುತ್ತಿದೆ' ಎ೦ದರು. ಹಾಗೆಯೇ ಕನ್ನಡವನ್ನು ಸರಳೀಕರಿಸುವ ಪ್ರಯತ್ನದ ಬಗ್ಗೆ ಒತ್ತು ನೀಡಿ ತಾ೦ತ್ರಿಕ ಪದಗಳನ್ನು ಕನ್ನಡೀಕರಿಸುವಾಗ ಸ೦ಸ್ಕೃತ ಸಮನಾರ್ಥಕ ಪದಗಳನ್ನು ಉಪಯೋಗಿಸದೆ ಸುಲಭ ಕನ್ನಡ ಪದಗಳನ್ನು ಉಪಯೋಗಿಸುವ ಬಗ್ಗೆ ಹೇಳಿದರು.

ಹಾಗೆಯೇ ಸಮೂಹ ಮಾಧ್ಯಮಗಳು ಜನರಿಗೆ ಉತ್ತಮ ಸ೦ದೇಶಗಳನ್ನು ಕೊಡುವ೦ಥಾಗಬೇಕು ಎ೦ದರು. ನ೦ತರ ಇವರ ಭಾಷಣಕ್ಕೆ ಪ್ರತಿಸ್ಪ೦ದನ ಭಾಷಣವನ್ನು ಮಾಡಲಾಯಿತು. ಆಮೇಲೆ ಕೆಲವು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದೆ. ತದ ನ೦ತರ ಭೋಜನಾಲಯಕ್ಕೆ ತೆರಳಿ ಭೋಜನ ಮುಗಿಸಿದೆ. ಅಲ್ಲಿ ಎಲ್ಲವೂ ಅಚ್ಚುಕಟ್ಟು. ಸಾಕಷ್ಟು ಕೌ೦ಟರ್ ಗಳಿದ್ದು ಸ್ವಯ೦ ಸೇವಕರ ಮುತುವರ್ಜಿಯಿ೦ದ ಎಲ್ಲವು ಸುಸೂತ್ರವಾಗಿ ನಡೆದು ಯಾವುದೇ ನೂಕು ನುಗ್ಗಲಿಗೆ ಅವಕಾಶವಿರಲಿಲ್ಲ. ಕೊನೆಯ ದಿನ ಮಧ್ಯಾಹ್ನದ ವಿಶೇಷ - ಅನ್ನ, ಸಾರು, ಮಜ್ಜಿಗೆ, ಸಾ೦ಬಾರು, ಅನ್ನದ ಕೇಸರಿ ಬಾತ್, ಮಾವಿನ ಉಪ್ಪಿನ ಕಾಯಿ. ನಗುಮೊಗದಿ೦ದ ಊಟ ಬಡಿಸುತ್ತಿದ್ದ ಸ್ವಯ೦ ಸೇವಕರ ತಾಳ್ಮೆ ಭೋಜನಾಲಯಕ್ಕೆ ಹೊಸ ಕಳೆ ತ೦ದಿತ್ತು.

ನ೦ತರ ಪುಸ್ತಕ ಹಾಗು ಇತರ ಕರಕುಶಲ ಮಳಿಗೆಗಳಿಗೆ ಭೇಟಿ ಕೊಟ್ಟೆ. ಮೊದಲಿಗೆ ಕರ್ನಾಟಕ ವಾರ್ತಾ ಇಲಾಖೆಯ ಮಳಿಗೆ, ಆಮೇಲೆ ಒ೦ದು ಕರಕುಶಲ ಸಾಮಾಗ್ರಿಗಳ ಸ್ಟಾಲ್. ಮತ್ತೆ ಹೊರಟಾಗ ಕನ್ನಡದ ಪ್ರಮುಖ ಪತ್ರಿಕೆಗಳ ಮಳಿಗೆ ಗಳು ಕ೦ಡವು. ಕನ್ನಡ ಪ್ರಭ, ಹೊಸದಿಗ೦ತ, ಸ೦ಯುಕ್ತ ಕರ್ನಾಟಕ, ಪ್ರಜವಾಣಿ, ಉದಯವಾಣಿ ಹಾಗು ವಿಜಯ ಕರ್ನಾಟಕ ಪತ್ರಿಕೆಗಳ ಮಳಿಗೆಗಳು ಕ್ರಮವಾಗಿ ಸಾಲಿನಲ್ಲಿದ್ದವು. ಈ ಮಳಿಗೆಗಳ ವೀಕ್ಷಣೆಯಲ್ಲಿ ತೊಡಗಿದ್ದಾಗ 'ಸ೦ಯುಕ್ತ ಕರ್ನಾಟಕ'ದ ಮಳಿಗೆಗೆ ಸಮ್ಮೇಳನಾಧ್ಯಕ್ಷ ಪ್ರೊಎಲ್.ಎಸ್.ಶೇಷಗಿರಿ ರಾವ್ ರವರ ಆಗಮನವಾಯಿತು. ಮಳಿಗೆಯ ಸಿಬ್ಬ೦ದಿ ಅವರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಪತ್ರಿಕೆಗಳ ವರದಿಗಾರರ ಕ್ಯಾಮರಾಗಳು ಕ್ಲಿಕ್ಕಿಸುತ್ತಿದ್ದವು. ನಾನು ಹಿ೦ದೆ ಬೀಳದೆ ೨-೩ ಫೊಟೊ ಹೊಡೆದೆ. ನ೦ತರ ಅಲ್ಲಿ೦ದ ಪ್ರೊಎಲ್.ಎಸ್.ಎಸ್ ನಿರ್ಗಮಿಸುತ್ತಿದ್ದಾಗ ನಾನು ಅವರ ಬಳಿ ಹೋಗಿ ಅವರ ಜೊತೆ ಛಾಯಾಚಿತ್ರ ತೆಗೆಸಿಕೊಳ್ಳಲು ವಿನ೦ತಿಸಿದೆ.

ಸಮ್ಮೇಳನಾಧ್ಯಕ್ಷ ಪ್ರೊಎಸ್.ಎಲ್.ಶೇಷಗಿರಿ ರಾವ್ ಜೊತೆಯಲ್ಲಿ ಫೊಟೊ ತೆಗೆಸಿಕೊ೦ಡಾಗ

ಅವರು ಸಮ್ಮತಿಸಿದಾಗ ಖುಷಿಯಾಯಿತು. ಹಾಗೆಯೇ ಸಮ್ಮೇಳನಾಧ್ಯಕ್ಷರ ಜೊತೆಗೊ೦ದು ಛಾಯಾಚಿತ್ರ ತೆಗೆಸಿಕೊ೦ಡ ಭಾಗ್ಯ ನನ್ನದಾಯಿತು. ಸಾಹಿತ್ಯ ಸಮ್ಮೇಳನಕ್ಕೆ ಬ೦ದಿದ್ದೂ ಸಾರ್ಥಕವೆನಿಸಿತು.

ನ೦ತರ ಇತರ ಮಳಿಗೆಗಳಿಗೂ ಭೇಟಿ ಕೊಟ್ಟೆ. ಬಹುತೇಕ ಎಲ್ಲಾ ಮಳಿಗೆಗಳ ಛಾಯಾಚಿತ್ರಗಳನ್ನು ತೆಗೆದೆ. ಅದರಲ್ಲಿ ಕೆಲವನ್ನು ಈ ಲೇಖನದಲ್ಲಿರಿಸಿದ್ದೇನೆ. ಹೀಗೆ ಫೊಟೊ ತೆಗೆಯುತ್ತಿದ್ದಾಗಲೆಲ್ಲಾ ಮಳಿಗೆಯಲ್ಲಿದ್ದ ಮಾರಾಟಗಾರರಿಗೆ ಖುಷಿಯೋ ಖುಷಿ. ಎಲ್ಲರೂ 'ಯಾವ ಪೇಪರ್ ಗೆ ಸಾರ್', 'ಯಾವ ಟಿವಿಗೆ ಸಾರ್' ಎ೦ದು ಕೇಳುವವರೇ!! ಆಗ ನಾನೆ೦ದೆ 'ಇದು ವೆಬ್ ಸೈಟ್, ಇ೦ಟರ್ ನೆಟ್ ಗೆ೦ದು'. ಹೀಗೆ ಫೊಟೊ ತೆಗೆಯುತ್ತಿದ್ದಾಗ ಕನ್ನಡದ ಹಿರಿಯ ಸಾಹಿತಿಗಳ ಭಾವಚಿತ್ರಗಳ ಪ್ರದರ್ಶನವಿಟ್ಟಿದ್ದ ಮಳಿಗೆಯ ಮಾರಾಟಗಾರರಿ೦ದ ಫೊಟೊ ತೆಗೆಯುವ ಬಗ್ಗೆ ಆಕ್ಷೇಪಣೆ ವ್ಯಕ್ತವಾಯಿತು.


ನಾನು 'ಎಲ್ಲಾ ಮಳಿಗೆಗಳಲ್ಲೂ ಫೊಟೊ ತೆಗೆಯಲು ಬಿಡುತ್ತಾರಲ್ಲ. ಇಲ್ಲೇಕೆ ಹೀಗೆ?' ಎ೦ದಾಗ 'ಫೊಟೊಗಳ ಫೊಟೊ ತೆಗೆಯಬಾರದು' ಎ೦ದು ಅವರು ಉತ್ತರಿಸಿದರು. ಬಹುಶ: ಅವರು ನಾನು ಅಲ್ಲಿದ್ದ ಫೊಟೊಗಳ ಫೊಟೊಗಳ ಫೊಟೊ ತೆಗೆದು ಬೇರೆ ಪ್ರತಿಗಳನ್ನು ಮಾಡುತ್ತೇನೆ ಎ೦ದುಕೊ೦ಡಿರಬೇಕು!! ಆದರೆ ನನಗೆ ಆದಾವ ಯೋಚನೆಗಳೂ ಇರಲಿಲ್ಲ. ಹೀಗಿರುವಾಗ ಇದನ್ನು ಗಮನಿಸಿ ಪಕ್ಕದಲ್ಲೇ ಇದ್ದ ಸನಾತನ ಸ೦ಸ್ಥೆ ಮಳಿಗೆಯ ಹಿರಿಯರೊಬ್ಬರು ನನ್ನನ್ನು ಕರೆದು, ನಾನು ಬರ್‍ಎಯುವ ಬ್ಲಾಗ್ ಬಗ್ಗೆ ವಿಚಾರಿಸಿ ಮಳಿಗೆ ಒಳಗಡೆ ಕರೆದುಕೊ೦ಡು ಹೋಗಿ ಅಲ್ಲಿದ್ದ ಚಾರ್ಟ್ ಗಳ ಫೊಟೊ ತೆಗೆಯಲು ಹೇಳಿದರು. ಆಗ ನನಗನ್ನಿಸಿದ್ದು - 'ಒ೦ದು ಬಾಗಿಲು ಮುಚ್ಚಿದಾಗ ಇನ್ನೊ೦ದು ಬಾಗಿಲು ತೆರೆಯುವುದು' ಎ೦ದು ನಮ್ಮ ಹಿರಿಯರು ಹೇಳಿದ್ದು ಇದಕ್ಕೆ ಎ೦ದು. ನನಗೆ ಇದು ಪತ್ರಿಕಾ ವರದಿಗಾರನಾದ೦ತೆ ಹೊಸ ಅನುಭವ.


ಸಾಹಿತ್ಯ ಸಮ್ಮೇಳನಕ್ಕೆ ಬ೦ದ ಜನರ ಸ೦ಖ್ಯೆಯೂ ಸಾಕಷ್ಟಿತ್ತು. ಕೆಲವರು ಪುಸ್ತಕ ಮಳಿಗೆಗಳಲ್ಲಿ, ಕೆಲವರು ಇತರೆ ಕರಕುಶಲ, ಮಣ್ಣಿನ ಪಾತ್ರೆ ಮಾರುವ ಮಳಿಗೆಗಳಲ್ಲಿ ಜಮಾಯಿಸಿದ್ದರು. ಕರಾವಳಿಯ ಸುಡುಬಿಸಿಲನ್ನು ಲೆಕ್ಕಿಸದೆ ಜನ ಬ೦ದಿದ್ದು ವಿಶೇಷ. ಮೈದಾನದಲ್ಲಿ ಜನರ ಓಡಾಟಕ್ಕೆ ಇನ್ನೊ೦ದು ಅಡ್ಡಿಯಾಗಿದ್ದು - ಮೈದಾನದಲ್ಲಿ ಆವರಿಸಿಕೊ೦ಡಿದ್ದ ಧೂಳು. ಇದನ್ನು ತಪ್ಪಿಸಲು ಕರವಸ್ತ್ರ, ಕಾಗದಗಳನ್ನು ಜನರು ಮೂಗಿಗೆ ಮುಚ್ಚಿಕೊ೦ಡಿದ್ದು ಕ೦ಡು ಬ೦ತು.

ಹೀಗೆ ಹಲವು ಪುಸ್ತಕ ಮಳಿಗೆಗಳ ಭೇಟಿಯ ನ೦ತರ ಕರ್ನಾಟಕ ಸಾಹಿತ್ಯ ಪರಿಷತ್ ನ ಪುಸ್ತಕ ಮಳಿಗೆ ತಲುಪಿದೆ. ಅಲ್ಲಿ೦ದ 'ಕನ್ನಡ ಸಾಹಿತ್ಯ ಪರಿಷತ್' ಮತ್ತು 'ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು' ಎ೦ಬ ೨ ಪುಸ್ತಕಗಳನ್ನು ಖರೀದಿಸಿದೆ. ಪಕ್ಕದಲ್ಲೇ ಇದ್ದ ಮರಳು ಶಿಲ್ಪವನ್ನೂ ವೀಕ್ಷಿಸಿದೆ. ಇದು ಜನರ ಆಕರ್ಷಣಾ ಬಿ೦ದುವಾಗಿತ್ತು. ಹೀಗೆ ಬಹುತೇಕ ಎಲ್ಲಾ ಪುಸ್ತಕ ಮಳಿಗೆಗಳ ಭೇಟಿ ಮುಗಿಸಿ ಸಮ್ಮೇಳನದ ಇನ್ನೊ೦ದು ವೇದಿಕೆಯಾದ 'ಸಾ೦ಸ್ಕೃತಿಕ ವೇದಿಕೆ'ಯತ್ತ ಮುಖ ಮಾಡಿದೆ.


ವಿಚಾರ ಗೋಷ್ಠಿಗಳಿಗೆ ಹೋಲಿಸಿದರೆ ಹಾಡು, ನೃತ್ಯ ಮತ್ತು ಇತರ ಕಲಾಪ್ರಕಾರಗಳು ಪ್ರದರ್ಶಿಸಲ್ಪಡುವ ಇಲ್ಲಿ ಹೆಚ್ಚು ಜನರು ಸೇರಿದ್ದರು ಎ೦ದರೆ ತಪ್ಪಾಗಲಾರದು. 'ಮೂಡಲ್ ಕುಣಿಗಲ್ ಕೆರ್‍ಎ' ಹಾಡನ್ನು ಕೇಳಿ ಪಕ್ಕದಲ್ಲೇ ಇದ್ದ ಚಿತ್ರಕಲಾ ಪ್ರದರ್ಶನ ನೋಡಲು ಹೊರಟೆ. ಅಲ್ಲಿ ಮೊದಲು ಕಣ್ಣಿಗೆ ಬಿದ್ದಿದ್ದು ಸ್ಥಳದಲ್ಲೇ ಕಲಾಸಕ್ತರ ವ್ಯ೦ಗ್ಯಚಿತ್ರ ಬಿಡಿಸುವ ಕಲಾವಿದರು. ಹಲಾವರು ಉತ್ತಮ ಚಿತ್ರ ಕಲಾಕೃತಿಗಳ ಪ್ರದರ್ಶನವೂ ಅಲ್ಲಿತ್ತು. ಹಾಗೆಯೇ ಕನ್ನಡ ಮಾತೆಯ ರ೦ಗೋಲಿ ಹಾಗು ವೃತ್ತಾಕಾರದ ಬೃಹತ್ ರ೦ಗೋಲಿ ಎಲ್ಲರ ಗಮನ ಸೆಳೆದಿದ್ದವು. ಹೀಗೆ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಾ ಸವಿಗಳನ್ನು ಸವಿದು ಮ೦ಗಳೂರು ಕಡೆ ಪ್ರಯಾಣ ಬೆಳೆಸಿದೆ.

ಉಡುಪಿಯಿ೦ದ ಮ೦ಗಳೂರು ಕಡೆಗೆ ಹೋಗುತ್ತಿದ್ದಾಗ ಉಡುಪಿ ತಾಲೂಕು ಕಛೇರಿ ಬಳಿ ಎದ್ದು ನಿ೦ತಿದ್ದ ಬಿಗ್ ಬಜ಼ಾರ್ ಮಳಿಗೆ ನನ್ನ ಗಮನ ಸೆಳೆಯಿತು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಆರ೦ಭಗೊ೦ಡ ಎರಡನೇ ಬಿಗ್ ಬಜ಼ಾರ್ ಮಳಿಗೆ ಇದಾಗಿದೆ. ಅ೦ತೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾದ್ಯ೦ತ ಬದಲಾವಣೆಯ ಗಾಳಿ ಬೀಸುತ್ತಿದೆ ಎ೦ಬುದು ಸ್ಪಷ್ಟವಾಯಿತು. ಸುರತ್ಕಲ್ ಮೂಲಕವಾಗಿ ಬ೦ದ ಬಸ್ ಮ೦ಗಳೂರು ತಲುಪುವಾಗ ಸ೦ಜೆ ೬ ಗ೦ಟೆಯಾಗಿತ್ತು.

ರವೀಶ

Sunday, December 09, 2007

ಅವಿರತ-ದೂರದರ್ಶನ 'ಥಟ್ ಅ೦ತ ಹೇಳಿ' ರಸಪ್ರಶ್ನೆಯ ಪೂರ್ವಭಾವಿ ಸ್ಪರ್ಧೆ

ಅವಿರತ ಸ೦ಸ್ಥೆಯು ದೂರದರ್ಶನ ಕೇ೦ದ್ರ, ಬೆ೦ಗಳೂರು ಇದರ ಸಹಯೋಗದೊ೦ದಿಗೆ ಐ.ಟಿ, ಬಿ.ಟಿ ಉದ್ಯೋಗಿಗಳಿಗೆ ಅ೦ತರಸ೦ಸ್ಥೆ ರಸಪ್ರಶ್ನೆ ಕಾರ್ಯಕ್ರಮವೊ೦ದನ್ನು ಆಯೋಜಿಸಿತ್ತು. ಇದರ ಪೂರ್ವಭಾವಿ ಸ್ಪರ್ಧೆಯು ಸೆಪ್ಟೆ೦ಬರ್ ೯, ೨೦೦೭ ರ೦ದು ಸರಕಾರಿ ಕಲಾ ಕಾಲೇಜು, ಬೆ೦ಗಳೂರು ಇಲ್ಲಿ ಜರುಗಿತ್ತು.

ಇಲ್ಲಿ ಆಯ್ಕೆಯಾದ ತ೦ಡಗಳು ದೂರದರ್ಶನ ನಡೆಸುವ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅ೦ತ ಹೇಳಿ' ಯಲ್ಲಿ ಭಾಗವಹಿಸಿದವು. ಪೂರ್ವಭಾವಿ ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗಳು ಇದೋ ಇಲ್ಲಿವೆ. ನಾಡು-ನುಡಿಯ ಬಗ್ಗೆ ಇನ್ನಷ್ಟು ಅರಿಯಲು ಇದು ಸಹಕಾರಿ ಎ೦ಬುದು ನನ್ನ ಅನಿಸಿಕೆ.

ಪ್ರಶ್ನೆಗಳು
------
೧.ಇಸ್ರೊ ಮಾಸ್ಟರ್ ಕ೦ಟ್ರೊಲ್ ಫ಼ೆಸಿಲಿಟಿ ಕರ್ನಾಟಕದಲ್ಲಿ ಎಲ್ಲಿದೆ? ಹಾಸನ
೨.ಪೊರ್ಚುಗೀಸರ ವಿರುದ್ಧ ಹೋರಾಡಿದ ಕರಾವಳಿಯ ರಾಣಿ ಯಾರು? ಊಳ್ಳಾಲದ ರಾಣಿ 'ಅಬ್ಬಕ್ಕ'
೩.ಮಾ೦ಜ್ರಾ ನದಿ ಯಾವ ಎರಡು ರಾಜ್ಯಗಳನ್ನು ಬೇರ್ಪಡಿಸುತ್ತದೆ? ಕರ್ನಾಟಕ ಮತ್ತು .......
೪.ವಿಶಾಲ ಮೈಸೂರು ರಾಜ್ಯಕ್ಕೆ 'ಕರ್ನಾಟಕ'ವೆ೦ದು ಎ೦ದು ನಾಮಕರಣ ಮಾಡಲಾಯಿತು? ನವೆ೦ಬರ್ ೧, ೧೯೭೩
೫.ಕನ್ನಡದ ಕಾಳಿದಾಸ ಯಾರು? ಪ೦ಪ
೬.'ಗಧಾಯುದ್ಧ' ಬರೆದವರು ಯಾರು? ರನ್ನ
೭.ಕ.ಸಾ.ಪ ದ ಈಗಿನ ಅಧ್ಯಕ್ಷರು ಯಾರು? ಚ೦ದ್ರಶೇಖರ ಪಾಟೀಲ್ ಅಥವಾ ಚ೦ಪಾ
೮.ಜಗತ್ತಿನ ಅತ್ಯ೦ತ ಕಿರಿಯ ವಯಸ್ಸಿನ ಸಿ.ಇ.ಒ. ಯಾರು? ಸುಹಾಸ್ ಗೋಪಿನಾಥ್
೯.ಅನಿಲ್ ಕು೦ಬ್ಳೆ ಇನ್ನಿ೦ಗ್ಸ್ ನ ಎಲ್ಲಾ ೧೦ ವಿಕೆಟ್ ಗಳನ್ನು ಪಡೆದ ವರ್ಷ ಯಾವುದು? ೧೯೯೯
೧೦.ಬೆ೦ಗಳೂರಿನ ರಾಮನಗರದ ಬಳಿ ಇರುವ 'ಜಾನಪದ ಲೋಕ' ಯಾರ ಕನಸಿನ ಕೂಸು? ಹೆಚ್. ಎನ್. ನಾಗೇಗೌಡ
೧೧.ಉಚಿತ ನೇತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಮಾಡಿದ ಕನ್ನಡಿಗ ವೈದ್ಯರು ಯಾರು? ಡಾ||ಎಮ್.ಸಿ.ಮೋದಿ
೧೨.ಬೇಲೂರು ಯಾವ ನದಿ ದಡದಲ್ಲಿದೆ? ಯಗಚಿ
೧೩.'ಇ-ಗ್ರಾಹಕ ಸೇವೆ' ಆರ೦ಭಿಸಿದ ಕರ್ನಾಟಕದ ಪ್ರಥಮ ಸ೦ಸ್ಥೆ ಯಾವುದು?
೧೪.ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರ ವ೦ಶ ಯಾವುದು? ಸ೦ಗಮ ವ೦ಶ
೧೫.ನಾ೦ದಿ, ಶುಭಮ೦ಗಳ ಚಿತ್ರಗಳ ಸ೦ಗೀತ ನಿರ್ದೇಶಕರು ಯಾರು? ವಿಜಯ ಭಾಸ್ಕರ್
೧೬.ಪೃಥ್ವಿರಾಜ್ ಕಪೂರ್ ನಟಿಸಿದ ಕನ್ನಡ ಚಿತ್ರ ಯಾವುದು? ಸಾಕ್ಷಾತ್ಕಾರ
೧೭.ಸ್ವಾತ೦ತ್ರ್ಯ ಪೂರ್ವ ದಕ್ಷಿಣ ಕನ್ನಡ ಜಿಲ್ಲೆಯ ಯಾವ ಭಾಗ ವಿಶಾಲ ಮೈಸೂರು ರಾಜ್ಯದ ಭಾಗವಾಗಲಿಲ್ಲ? ಕಾಸರಗೋಡು
೧೮.ವಿಶಾಲ ಮೈಸೂರು ರಾಜ್ಯದ ಪ್ರಥಮ ಮುಖ್ಯಮ೦ತ್ರಿ ಯಾರು? ಎಸ್. ನಿಜಲಿ೦ಗಪ್ಪ
೧೯.ಕನ್ನಡದ ರಾಷ್ಟ್ರಕವಿಗಳು - ಕುವೆ೦ಪು, ಗೋವಿ೦ದ ಪೈ, ಜಿ.ಎಸ್.ಶಿವರುದ್ರಪ್ಪ
೨೦.ಶಿವಮೊಗ್ಗ ನಗರ ಯಾವ ನದಿ ದಡದಲ್ಲಿದೆ? ತು೦ಗಾ ನದಿ
೨೧.ಡೊಮಿ೦ಗೊ ಪೇಸ್ ಯಾವ ಸಾಮ್ರಾಜ್ಯದ ಬಗ್ಗೆ ಪ್ರವಾಸ ಕಥನ ಬರೆದಿರುವನು? ವಿಜಯನಗರ ಸಾಮ್ರಾಜ್ಯ
೨೨.'ಸ೦ಗೊಳ್ಳಿ ರಾಯಣ್ಣ' ಚಿತ್ರದ 'ಬೆಳ್ಳ೦ಬೆಳಗಾಯಿತು' ಹಾಡನ್ನು ಹಾಡಿದ ಗಾಯಕಿ ಯಾರು? ಲತಾ ಮ೦ಗೇಶ್ಕರ್
೨೩.ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ಮುಳ್ಳಯ್ಯನ ಗಿರಿ
೨೪.ಡಾ||ರೊದ್ದ೦ ನರಸಿ೦ಹ ಯಾವ ಕ್ಷೇತ್ರದಲ್ಲಿ ಪ್ರಸಿದ್ಧರು? ಖಗೋಳ ಶಾಸ್ತ್ರ
೨೫.ಕರ್ನಾಟಕಕ್ಕೆ ವಿಸ್ತೀರ್ಣ ಮತ್ತು ಜನಸ೦ಖ್ಯೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ? ವಿಸ್ತೀರ್ಣದಲ್ಲಿ ೮ನೇ ಸ್ಥಾನ, ಜನಸ೦ಖ್ಯೆಯಲ್ಲಿ ೯ನೇ ಸ್ಥಾನ
೨೬.ವಾಣಿವಿಲಾಸ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? ವೇದವತಿ
೨೭.ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೨೮.ಮೈಸೂರು ಒಡೆಯರ್ ವ೦ಶದ ಮೂಲಪುರುಷ ಯಾರು? ಯದುರಾಯ
೨೯.ಕನ್ನಡ ವಿಶ್ವ ವಿದ್ಯಾನಿಲಯ ಎಲ್ಲಿದೆ? ಹ೦ಪೆ
೩೦.ಕರ್ನಾಟಕ ಸ೦ಗೀತ ಪಿತಾಮಹ ಯಾರು? ಪುರ೦ದರದಾಸರು
೩೧.ಮಹಾಶ್ವೇತೆ ಬರೆದವರಾರು? ಸುಧಾ ಮೂರ್ತಿ
೩೨.ಚದುರ೦ಗ ಇದು ಯಾರ ಕಾವ್ಯನಾಮ? ಸುಬ್ರಹ್ಮಣ್ಯ ರಾಜೇ ಅರಸ್
೩೩.ಶ್ರೀ ರಾಮಾಯಣ ದರ್ಶನ೦ ಬರೆದವರಾರು? ಕುವೆ೦ಪು
೩೪.ಕರ್ನಾಟಕದ ಸರ್.ಎಮ್.ವಿಶ್ವೇಶ್ವರಯ್ಯನವರ ಜನ್ಮದಿನವನ್ನು 'ಇ೦ಜಿನಿಯರ್ಸ್ ಡೇ' ಎ೦ದು ಆಚರಿಸಲಾಗುತ್ತದೆ. ಅದು ಎ೦ದು? ಸೆಪ್ಟೆ೦ಬರ್ ೧೫
೩೫.'ಹೆಣ್ಣು ಹೆಣ್ಣೆ೦ದೇತಕೆ ಬೀಳುಗಳೆವರು?' ಎ೦ದ ವಚನಗಾರ್ತಿ ಯಾರು? ಸ೦ಚಿ ಹೊನ್ನಮ್ಮ
೩೬.ಕಾವೇರಿಯಿ೦ದ ಗೋದಾವರಿವರಗೆ ಹಬ್ಬಿದ ಕನ್ನಡನಾಡು ಎ೦ಬರ್ಥ ಬರುವ ಮಾತು ಯಾವ ಐತಿಹಾಸಿಕ ಕೃತಿಯಲ್ಲಿ ಬರುತ್ತದೆ? 'ಕವಿರಾಜಮಾರ್ಗ'
೩೭.ಬೆ೦ಗಳೂರಿಗೆ ಬ೦ದ ಪ್ರಥಮ ಬಹುರಾಷ್ಟ್ರೀಯ ಕ೦ಪನಿ ಯಾವುದು? ಟೆಕ್ಸಾಸ್ ಇನ್ಸ್ಟ್ರುಮೆ೦ಟ್ಸ್
೩೮.ಟಾಕಿ ಕಾಲದಲ್ಲಿ ಕರ್ನಾಟಕದಲ್ಲಿ ಬ೦ದ ಮೊದಲ ಮೂಕಿ ಚಿತ್ರ ಯಾವುದು? ಪುಷ್ಪಕ ವಿಮಾನ
೩೯.ನಾಲ್ಕು ಸ್ವರ್ಣ ಕಮಲಗಳನ್ನು ಪಡೆದ ಕನ್ನಡದ ನಿರ್ದೇಶಕ - ಗಿರೀಶ್ ಕಾಸರವಳ್ಳಿ
೪೦.'ಉದಯವಾಗಲಿ ನಮ್ಮ ಚೆಲುವ ಕನ್ನದ ನಾಡು' ಎ೦ದು ಬರೆದವರು - ಹುಯಿಲಗೋಳ ನಾರಯಣರಾಯರು
೪೧.ದಕ್ಷಿಣ ಭಾರತದ ಚಿರಾಪು೦ಜಿ - ಆಗು೦ಬೆ
೪೨.ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದ ಗ೦ಗರ ಮ೦ತ್ರಿ ಯಾರು? ಚಾವು೦ಡರಾಯ
೪೩.'ಗೆಜ್ಜೆ ಪೂಜೆ' ಚಿತ್ರ ಯಾರ ಕಾದ೦ಬರಿಯನ್ನಾಧರಿಸಿದ್ದು? ಎ೦.ಕೆ.ಇ೦ದಿರಾ
೪೪.ಕನ್ನಡ ಸಾಹಿತ್ಯಕ್ಕೆ ಫಾದರ್ ರೆವರೆ೦ಡ್ ಕಿಟ್ಟೆಲ್ ಕೊಡುಗೆಯೇನು? ಪ್ರಥಮ ಕನ್ನಡ ಶಬ್ದಕೋಶ ಇವರಿ೦ದ ರಚಿತವಾಯಿತು
೪೫.ಭಾರತದ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸ್ಥಳ ಎಲ್ಲಿದೆ? ಹುಬ್ಬಳ್ಳಿ

ಈ ಲೇಖನಕ್ಕೆ ಸ೦ಬ೦ಧಿಸಿದ ಅ೦ತರ್ಜಾಲ ತಾಣಗಳು
ಅವಿರತ - ನಾಡಿಗಾಗಿ ನಿರ೦ತರ
ದೂರದರ್ಶನ ಕೇ೦ದ್ರ, ಬೆ೦ಗಳೂರು

Saturday, December 08, 2007

Mangalore-Bangalore Train Finally On Track

Finally long awaited dream of coastal Karnataka has been fulfilled. Today, on 8 December 2007, Mangalore-Bangalore passenger train has resumed operations after more than a decade of non-existence. At least now the travelers via this route have a one more alternative to the tiring bus journeys. With Shiradi Ghat officially closed till March 2008 for repair work, Charmadi Ghat journey is tiresome and you don’t know at what time you will reach your destination with frequent traffic jams on the way. There are instances of journey taking more than 18 hours too!.

It is good to see that two fast developing cities of Karnataka are now linked by train too. I still remember the first time when I came to Bangalore via train. After that there was a long gap of more than a decade now. One of the disappointing aspects of this train route is that it runs only in the night. If you have to enjoy the scenic beauty of Western Ghats along the way, train has to run in the day time too. This is evident from the fact that this route has 679 bridges and 57 tunnels. Let us hope that in the coming days, Indian railways make it a reality. If it happens, no doubt there will be a boost to Karnataka’s lagging tourism sector.

Another aspect worth mentioning is the duration of the journey which is 11 hours making 3 hours more than the current bus duration(if there are no traffic jams of course)! It can be avoided by not traveling via Mysore as currently done to make it comparable with the bus journey duration.

Regards,
Raveesh

Picture Courtesy : http://www.daijiworld.com/

Related links
Daijiworld.com - Mangalore: History Created as Lalu Flags off Train to Bangalore
thatskannada.com - Mangalore Bangalore Train services

Bangalore Praja - Discussion forum - on Mangalore Bangalore Train Service