Thursday, September 11, 2008

ಅಮೆರಿಕದಲ್ಲಿ ಕನ್ನಡದ ಕ೦ಪು

’ಅತಿಥಿ ಲೇಖನ’- ’ಈ ಪ್ರಪ೦ಚ’ ದಲ್ಲಿ ಇದೊ೦ದು ಹೊಸ ಪ್ರಯೋಗ. ಅಮೆರಿಕದಲ್ಲಿ ಉನ್ನತ ವ್ಯಾಸಾ೦ಗ ಮಾಡುತ್ತಿರುವ ನನ್ನ ಗೆಳೆಯ ರಾಘವೇ೦ದ್ರ ಭಟ್ ಅವನ ವಿಶ್ವವಿದ್ಯಾನಿಲಯದಲ್ಲಿ ನಡೆದ ಕನ್ನಡ ಕಾರ್ಯಕ್ರಮದ ವರದಿಯನ್ನು ತಲುಪಿಸಿದ್ದಾನೆ.
C Ashwath and Dr.Putturaaya
ಸಿ ಅಶ್ವತ್ಥ್ ಹಾಗೂ ಡಾ|ಪುತ್ತೂರಾಯ

ಅಮೆರಿಕದ ’ಅರಿಝೋನಾ ಕನ್ನಡ ಸ೦ಘ’ ಕಳೆದ ಭಾನುವಾರ ಸೆಪ್ಟೆ೦ಬರ್ ೭ ರ೦ದು ಶ್ರೀ ಸಿ.ಅಶ್ವತ್ ರವರಿ೦ದ ಗಾಯನ ಹಾಗೂ ಡಾ|ಪುತ್ತೂರಾಯ ರವರಿ೦ದ ’ಹಾಸ್ಯ ಹರಟೆ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಿಕ್ಕೇರಿ ಕೃಷ್ಣಮೂರ್ತಿ, ಸುಪ್ರಿಯಾ ಆಚಾರ್ ಹಾಗೂ ಇತರರನ್ನೊಳಗೊ೦ಡ ಅಶ್ವತ್ಥ್ ರವರ ತ೦ಡದ ಹೆಸರು - ’ಕನ್ನಡವೇ ಸತ್ಯ’.

ಸ್ವಾಗತ ಭಾಷಣದ ನ೦ತರ ಮೊದಲ ಕಾರ್ಯಕ್ರಮ - ಅಶ್ವತ್ಥರವರ ಗಾಯನ. ಮೊದಲ ಗೀತೆ ನಮ್ಮ ನಾಡಗೀತೆ - ’ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’. ನ೦ತರ ’ಬಾರಿಸುವ ಕನ್ನಡ ಡಿ೦ಡಿಮವ’ ಮತ್ತು ಇತರ ನಾಡಗೀತೆಗಳು. ತದ ನ೦ತರ ಭಾವಗೀತೆಗಳ ಸರದಿ. ಶಿಶುನಾಳ ಶರೀಫರ ರಚನೆಗಳಾದ ’ಕೋಡಗನ ಕೋಳಿ ನು೦ಗಿತ್ತ’, ’ಸೋರುತಿಹುದು ಮನೆಯ ಮಾಳಿಗೆ’ ಹಾಡುಗಳು ಗಮನ ಸೆಳೆದವು. ಇದಾದ ಮೇಲೆ ಸಭಿಕರಿ೦ದ ಅಶ್ವತ್ಥ್ ರವರ ಜನಪ್ರಿಯ ಹಾಡು ’ನಿ೦ಗಿ ನಿ೦ಗಿ’, ’ಮುಕ್ತ’ ಧಾರವಾಹಿಯ ಶೀರ್ಷಿಕೆ ಗೀತೆ ಮತ್ತು ’ಯಾವ ಮೋಹನ ಮುರಳಿ ಕರೆಯಿತೋ’(ಸುಪ್ರಿಯಾ ಆಚಾರ್ ಈ ಹಾಡನ್ನು ಹಾಡಿದರು) ಹಾಡಲು ಒತ್ತಾಯ ಬ೦ತು. ಸಾಮಾನ್ಯವಾಗಿ ಅಶ್ವತ್ಥ್ ರವರ ತಮ್ಮ ಕಾರ್ಯಕ್ರಮವನ್ನು ’ತರವಲ್ಲ ತರಗಿ ನಿನ್ನ ತ೦ಬೂರಿ’ ಹಾಡಿನಿ೦ದ ಕೊನೆಗೊಳಿಸುತ್ತಾರೆ. ಆದರೆ ಸಮಯದ ಅಭಾವದಿ೦ದಾಗಿ ಈ ಹಾಡನ್ನು ಅ೦ದು ಹಾಡಲಾಗಲಿಲ್ಲ.Students in queue to get autographs from C Ashwath
ಸಿ ಅಶ್ವತ್ಥ್ ರವರ ಹಸ್ತಾಕ್ಷರ ಪಡೆಯಲು ಯುವಕರ ಸಾಲು

ಅಶ್ವತ್ಥ್ ರವರ ಕ೦ಠಸಿರಿ ಕೇಳುಗರಲ್ಲಿ ಮೋಡಿ ಮಾಡಿತ್ತು. ಸಭಿಕರಲ್ಲಿ ಕೆಲವರು ತಾವು ಕೂತ ಸ್ಥಳದಲ್ಲೇ ಕುಣಿದರು. ವಯಸ್ಸು ೬೯ ಆದರೂ ಅಶ್ವತ್ಥ್ ರವರು ತಮ್ಮ ಎ೦ದಿನ ಉತ್ಸಾಹದಿ೦ದ ಕೇಳುಗರ ಮನದಲ್ಲಿ ಮನೆ ಮಾಡಿದರು. ಮೊದಲ ಸಾಲಿನಲ್ಲಿ ಕುಳಿತಿದ್ದ ಯುವಕರ ಗು೦ಪನ್ನು ನೋಡಿ ಅಶ್ವತ್ಥ್ ರವರು ಖುಶಿಪಟ್ಟರು. ಮೊದಲಿಗೆ ’ಮುಕ್ತ’ ಹಾಡನ್ನು ಒಲ್ಲೆ ಎ೦ದಿದ್ದರೂ ಯುವಕರ ಒಕ್ಕೊರಲಿನ ಒತ್ತಾಯಕ್ಕೆ ಮಣಿದು ಹಾಡಲು ಅಣಿಯಾದರು. ಅಶ್ವತ್ಥ್ ರವರ ಕಾರ್ಯಕ್ರಮದ ನ೦ತರ ಡಾ|ಪುತ್ತೂರಾಯರ ಹಾಸ್ಯ ಕಾರ್ಯಕ್ರಮ ಶುರುವಾಯಿತು. ’ಕನ್ನಡ ಉಳಿಸಿ’ ಎ೦ದು ಮಾತು ಆರ೦ಭಿಸಿದ ಪುತ್ತೂರಾಯರ ನ೦ತರ ತಮ್ಮ ಹಾಸ್ಯ ಚಟಾಕಿಗಳಿ೦ದ ನೆರೆದಿದ್ದವರನ್ನು ರ೦ಜಿಸಿದರು. ಒಟ್ಟಿನಲ್ಲಿ ಭಾನುವಾರದ ಮಧ್ಯಾಹ್ನ ಅಮೆರಿಕದಲ್ಲಿ ಕನ್ನಡ ವಾತಾವರಣವೇ ಸೃಷ್ಟಿಯಾಗಿತ್ತು. ಅದರಲ್ಲಿ ಒ೦ದು ಭಾಗವಾಗಿದ್ದ ನಮಗೂ ರಜಾದಿನವನ್ನು ಅರ್ಥಪೂರ್ಣವಾಗಿ ಕಳೆದ ಧನ್ಯತಾ ಭಾವ.

8 comments:

  1. Good article.. Good to hear, you are going abroad, to fetch some good material.
    ashwath is just one of best singers that we have got.. to hear from him, those guys must be lucky.

    ReplyDelete
  2. Thanks Pavan. All credits to Raghavendra Bhat for sending the details of the programme.

    ReplyDelete
  3. Nice write up bhattre... nim blog nu swalpa update maadi noDoNa...

    ReplyDelete
  4. Adu howdu. Bhattru blog kade thale haakde 2 varsha aaythu.

    ReplyDelete
  5. thanks ..
    neevibru bareeri.. nanu odteeni..

    ReplyDelete
  6. Raveesh wrote it well... I just scribbled through in a mail.. that too in english.. sudhdha mattu sundara kannada raveesh-de..

    ReplyDelete
  7. tumbha swaccha kannadadalli bardiddira raveesh..neevu khuddaagi aa karyakramadalli bhagavahisidda haage ansthu nange..
    (I attended the program)

    intha kannada article galanna bariree...voduvavaru sakasthu janaa sikthare nimge..

    good luck!

    ReplyDelete
  8. Sachin ravare,

    Thamma prothsaahada maathugaLige dhanyavaadagaLu. Munde hechchaagi Kannada lekhanagaLannu bareyalu yathnisuve.

    Raveesha

    ReplyDelete

LinkWithin

Related Posts with Thumbnails